'ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ'

No alliance with any party-HDD

05-12-2017

ಬಳ್ಳಾರಿ: ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಬಳ್ಳಾರಿ ಜಿಲ್ಲೆಯ, ಬಳ್ಳಾರಿ ನಗರದಲ್ಲಿರುವ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಸಲ್ಲಿಸಿದ್ದಾರೆ. ನಂತರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು, ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿಯಿಲ್ಲ, ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದ್ದು, ಪ್ರಜ್ಞಾವಂತ ಮತದಾರರು ಈ ಬಾರಿ ಜೆಡಿಎಸ್ ಕೈಹಿಡಿಯಲಿದ್ದಾರೆ, ನನ್ನ 85ನೇ ವಯಸ್ಸಿನಲ್ಲಿ ಸಂಕಲ್ಪ ಮಾಡಿದ್ದೇನೆ, ಇದನ್ನು ವಿರೋಧ ಪಕ್ಷಗಳು ಹಗಲು ಕನಸು ಅಂದುಕೊಂಡ್ರೂ ಚಿಂತೆಯಿಲ್ಲ ಎಂದರು.

ಮಂಗಳೂರು ಪರಿಸ್ಥಿತಿ ಹುಣುಸೂರಿಗೆ ಬಂದಿದೆ, ಇಂದಿರಾ ಕ್ಯಾಂಟೀನ್ ನಿಂದ ಬಡವರ ಹಸಿವು ನೀಗಿಸಲು ಸಾಧ್ಯವಿಲ್ಲ, ಅದು ವಾಯು ವಿಹಾರಕ್ಕೆ ಬರುವವರಿಗೆ ಅನುಕೂಲವಾಗುತ್ತದೆ ಎಂದು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಟೀಕಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿಯವರು ಗೋಹತ್ಯೆ ನಿಷೇಧದ ಬಗ್ಗೆ ಚುನಾವಣೆ ಸಂದರ್ಭ ಮಾತಾಡೋದು ಸರಿಯಲ್ಲ ಎಂದರು.

ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಅವರ ಆಡಳಿತದ ಕಾರ್ಯಕ್ರಮಗಳು ಜನಪರವಾಗಿದ್ದವು, ಜಾತ್ಯಾತೀತವಾಗಿದ್ದವು, ಕರ್ನಾಟಕದ ಜನರಲ್ಲಿ ರಾಜಕೀಯ ಪ್ರಬುದ್ಧತೆ ಇದೆ, ಯಾರನ್ನು ಆಯ್ಕೆ ಮಾಡಬೇಕೆಂದು ಅವರಿಗೆ ತಿಳಿದಿದೆ, ಸಿದ್ದರಾಮಯ್ಯ ಅವರ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಒಪ್ಪಿಕೊಳ್ಳಬಹುದು ಆದರೆ ಕುಮಾರಸ್ವಾಮಿ ಅವರ ಸರ್ಕಾರ ಉತ್ತಮ ಆಡಳಿತ ನೀಡಿದರೂ ಕುಮಾರಸ್ವಾಮಿ ಎಂದೂ ಹೇಳಿಕೊಳ್ಳಲಿಲ್ಲ ಎಂದು ಹೇಳಿದರು.

ಬಿಜೆಪಿ ಮುಖಂಡರ ನಡವಳಿಕೆಗಳು ತದ್ವಿರುದ್ಧ ನಡವಳಿಕೆಗಳು, ಉಡುಪಿಯಲ್ಲಿ ಧರ್ಮ ಸಂಸತ್ ನಡೆಸಿ ಹತ್ತು ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ ಎಂಬ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿ, ಹಾಗಾದರೆ ಮುಸ್ಲಿಂರು, ಇತರ ಧರ್ಮದವರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಮೋದಿ ಇಷ್ಟು ದಿವಸ ಅಭಿವೃದ್ಧಿ ಅಂತ ಭಾಷಣ ಮಾಡಿ ಈಗ ನಾನೊಬ್ಬ ಗುಜರಾತಿ ನನ್ನ ಉಳಿಸಿಕೊಳ್ಳಿ ಎಂದು ಹೇಳುತ್ತಿರುವುದು ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದರು. 2018 ರ ಚುನಾವಣೆಯಲ್ಲಿ 80 ಸ್ಥಾನ ಗೆಲ್ಲಬಹುದು ಎಂದ ಅವರು, ಜನತೆ ಮುಂದೆ ಹೋಗಿ ಕೇಳುವೆ, ನನ್ನ ಆಡಳಿತಾವಧಿಯಲ್ಲಿ ಮಾಡಿದ ಕೆಲಸಗಳ ಬಗ್ಗೆ ಹೇಳಿ ಅವರಿಂದ ಮತ ಪಡೆಯುವೆ ಎಂದರು.


ಸಂಬಂಧಿತ ಟ್ಯಾಗ್ಗಳು

Deve Gowda ellection ಸುದ್ದಿಗೋಷ್ಟಿ ಮತದಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ