ಕೆಪಿಸಿಸಿಯಲ್ಲಿ ಇಂದಿನಿಂದ 3 ದಿನ ಸಭೆ

3 day meeting in KPCC

05-12-2017

ಬೆಂಗಳೂರು: ಇಂದಿನಿಂದ ಮೂರುದಿನಗಳ ಕಾಲ ಕೆಪಿಸಿಸಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಅಲ್ಲದೇ ಸಭೆಯಲ್ಲಿ ಎಸ್.ಟಿ/ ಎಸ್.ಸಿ ಮೋರ್ಚಾ, ಯುವ ಮಹಿಳಾ ಮೋರ್ಚಾ, ಎಲ್ಲಾ ನಗರ ಜಿಲ್ಲಾ, ತಾಲ್ಲೂಕು ಮಟ್ಟದ ಪಕ್ಷದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತ್ಯೇಕ ಯಾತ್ರೆ ಮಾಡಲು ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯ ಭರವಸೆ ಮತ್ತು ಈಡೇರಿಕೆಯ ಬಗ್ಗೆ ಇಂದಿನ ಸಭೆಯಲ್ಲಿ ಪಕ್ಷದ ಮುಂದಿನ ನಡೆ ಬಗ್ಗೆ ಚರ್ಚೆ ನಡೆಯಲಿದೆ. ಮನೆ ಮನೆಗೆ ಕಾಂಗ್ರೆಸ್ ಸಕ್ಸಸ್ ಆಗಿದ್ದೀಯಾ ? ಮತ್ತು ನವೆಂಬರ್ 30ಕ್ಕೆ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಡೆಡ್ ಲೈನ್ ನೀಡಲಾಗಿತ್ತು. ಈ ವರೆಗೂ ಬೆಂಗಳೂರು ನಗರ ಜಿಲ್ಲೆಗಳಲ್ಲೆ ಬಹುತೇಕ ಕಡೆ, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಪೆಂಡಿಂಗ್ ಉಳಿದಿದೆ, ಈ ಕಾರ್ಯಕ್ರಮ ಯಶಸ್ವಿ ಬಗ್ಗೆ 3 ದಿನಗಳ ಸಭೆಯಲ್ಲಿ ಚರ್ಚೆಗೆ ಬರಲಿದೆ. ಮನೆ ಮನೆಗೆ ಕಾಂಗ್ರೆಸ್ ಗಿಂತಲೂ ಹೆಚ್ಚಾಗಿ  ಕಾಂಗ್ರೆಸ್ ಯಾತ್ರೆ ಯಶಸ್ವಿ ಮಾಡಲು ತೀರ್ಮಾನಿಸಲಾಗಿದ್ದು, ಸಿಎಂ ಜನಾರ್ಶಿವಾದ ಯಾತ್ರೆ ಗೂ ಕಾಂಗ್ರೆಸ್ ಯಾತ್ರೆಗೂ ದಿನಾಂಕ ಕ್ಲಾಶ್ ಆಗದಂತೆ ನೋಡಿಕೊಳ್ಳಲು ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಸಿಎಂ ಪ್ರತ್ಯೇಕ ಯಾತ್ರೆ ಮುಗಿಸಿ, ಕಾಂಗ್ರೆಸ್ ಯಾತ್ರೆಯಲ್ಲಿ ಭಾಗವಹಿಸುವಂತೆ ಮಾಡಲು ಕೈ ನಾಯರು, ಮಾಸ್ಟರ್ ಪ್ಲಾನ್ ಮಾಡಲಿದ್ದಾರಂತೆ.


ಸಂಬಂಧಿತ ಟ್ಯಾಗ್ಗಳು

Kpcc Venu gopal ಪ್ರತ್ಯೇಕ ಗುಂಡೂರಾವ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ