1 ಲಕ್ಷ ವಸತಿ ಯೋಜನೆಗೆ ಚಾಲನೆ

05-12-2017
ಬೆಂಗಳೂರು: ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ, ವೆಬ್ ಸೈಟ್ ಮೂಲಕ ಚಾಲನೆ ನೀಡಿದ್ದಾರೆ. ಸಿಎಂ ಅವರ ಈ ಮಹತ್ವದ ಯೋಜನೆಯು ಬೆಂಗಳೂರಿನ ಜನರಿಗೆ ಮಾತ್ರ ಸಹಕಾರಿಯಾಗಲಿದೆ. ಈ ಕಾರ್ಯಕ್ರಮದ ಮೊದಲ ಹಂತವಾಗಿ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆ ಎಂಬ ಕಾರ್ಯಕ್ರಮದಡಿ, ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕೋ ಆಪರೇಷನ್ ವತಿಯಿಂದ ಜಾರಿಗೆ ಬರಲಿದೆ.
ಯೋಜನೆಯಿಂದ ಒಂದು ಲಕ್ಷ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದ ಕುಟುಂಬಕ್ಕೆ ಸಹಾಯವಾಗಲಿದೆ ಎಂದಿದ್ದಾರೆ. ಅರ್ಜಿಸಲ್ಲಿಕೆಗಾಗಿ ಆನ್ ಲೈನ್ ನಲ್ಲಿ ಮಾತ್ರ ಅವಕಾಶವಿದ್ದು, ವೆಬ್ ಸೈಟ್ ಗೆ ಚಾಲನೆ ನೀಡಿದರು. ಯೋಜನೆಯ ಬಗ್ಗೆ ತಿಳಿಸಿದ ಅವರು, ವಸತಿ ನಿಲಯ ಒಂದು ಕೊಠಡಿ, ಹಾಲ್, ಅಡುಗೆ ಕೋಣೆ, ಶೌಚಾಲಯ ಹಾಗೂ ಸ್ನಾನದ ಮನೆ ಒಳಗೊಂಡಿದೆ. ಅರ್ಹ ಅರ್ಜಿದಾರರು ಸೂಕ್ತದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಕೆಯ ಶುಲ್ಕ 100 ರೂ ನಿಗದಿಪಡಿಸಲಾಗಿದೆ.
ಇನ್ನು ಫಲಾನುಭವಿಗಳು ಕನಿಷ್ಟ 5 ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸಿರಬೇಕು,ಕುಟುಂಬದ ಆದಾಯ ಗರಿಷ್ಟ 87600 ಮೀರಬಾರದು. ಪರಿಶಿಷ್ಟ ಜಾತಿಗೆ ಶೇ 30, ಪರಿಶಿಷ್ಟ ಪಂಗಡಕ್ಕೆ ಶೇ 10, ಅಲ್ಪಸಂಖ್ಯತರಿಗೆ ಶೇ 10 ಮತ್ತು ಸಾಮಾನ್ಯ ಶೇ 50 ರಷ್ಟು ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸರ್ಕಾರದಿಂದ 3.50 ಲಕ್ಷ ಮತ್ತು ಸಾಮಾನ್ಯ ವರ್ಗದವರಿಗೆ 2.70 ಲಕ್ಷ ಹಣ ಸರ್ಕಾರ ಸಹಾಯಧನವಾಗಿ ನೀಡಲಿದೆ. ಒಂದು ಮನೆಗೆ 5.50 ಲಕ್ಷದಿಂದ 6 ಲಕ್ಷ ಖರ್ಚಾಗಲಿದೆ. ಅರ್ಜಿದಾರರನ್ನು ಕಂಪ್ಯೂಟರೈಸ್ಡ್ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ವಸತಿ ಸಚಿವ ಕೃಷ್ಣಪ್ಪ, ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ಭಾಗಿಯಾಗಿದ್ದರು.
ಒಂದು ಕಮೆಂಟನ್ನು ಹಾಕಿ