ಇನ್ನೂ ಪತ್ತೆಯಾಗದ ಹಂತಕರ ಸುಳಿವು

Gauri lankesh death still mysterious

05-12-2017

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು, ಇಂದಿಗೆ ಮೂರು ತಿಂಗಳುಗಳು ಕಳೆದಿವೆ, ಆದರೆ ಹಂತಕರ ಸುಳಿವು ಮಾತ್ರ ಇನ್ನೂ ಪತ್ತೆಯಾಗಿಲ್ಲ. ವಿಶೇಷ ತನಿಖಾ ತಂಡ(ಎಸ್ಐಟಿ) ತನಿಖೆ ಮುಂದುವರೆಸಿದೆ. ಗೌರಿ ಲಂಕೇಶ್ ದೇಹದಲ್ಲಿದ್ದ ಬುಲೇಟ್ ಮಾದರಿ ಹುಡುಕಾಟದಲ್ಲಿ ಎಸ್ಐಟಿ ತಂಡ ತೊಡಗಿಕೊಂಡಿದೆ. ಈ ಸಂಬಂಧ ವಿಜಯಪುರ ಸೇರಿದಂತೆ, ಹಲವೆಡೆ ವಿಚಾರಣೆ ನಡೆಸುತ್ತಿದೆ. ಕಳೆದ ಮೂರು ತಿಂಗಳಿಂದ ಕಾರ್ಯಚರಣೆ ನಡೆಸುತ್ತಿರುವ ತಂಡಕ್ಕೆ ಗೌರಿ ಲಂಕೇಶ್ ಹತ್ಯೆ ಹಿಂದಿನ ರಹಸ್ಯ ಇನ್ನು ನಿಗೂಡವಾಗೇ ಉಳಿದಿದೆ.

ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ವಿಳಂಬ ಹಿನ್ನೆಲೆ, ಬೆಂಗಳೂರಿನಲ್ಲಿ ಗೌರಿ ಹತ್ಯೆ ವಿರೋಧಿ ವೇದಿಕೆಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ನಗರದ ಮೌರ್ಯ ಸರ್ಕಲ್ ನಿಂದ, ಸಿಎಂ ಮನೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ರ‍್ಯಾಲಿಯಲ್ಲಿ ವೇದಿಕೆಯ ಕಾರ್ಯಕರ್ತರು ಮತ್ತು ಹಲವಾರು ಮಂದಿ ಭಾಗವಹಿಸಲಿದ್ದಾರೆ. ಮತ್ತು ಹಂತಕರನ್ನು ಶೀಘ್ರದಲ್ಲೇ ಪತ್ತೆಹಚ್ಚುವಂತೆ ಒತ್ತಡ ಹೇರುವುದಾಗಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

gauri lankesh SIT ಹಂತಕ ಮೌರ್ಯ ಸರ್ಕಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ