ಚಿರತೆ ದಾಳಿಗೆ ವ್ಯಕ್ತಿ ಬಲಿ

cheetah killed a man

04-12-2017

ಕೊಡಗು: ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಕೋವರ್ ಕೊಲ್ಲಿಯ ನಗರೂರು ಕಾಫಿ ತೋಟದಲ್ಲಿ  ಚಿರತೆ ದಾಳಿಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕಾಫಿ ತೋಟದ ಕಾರ್ಮಿಕ ತಿಮ್ಮಪ್ಪ (65) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ತಿಮಪ್ಪ ಅವರ ದೇಹದ ಹಲವು ಭಾಗಗಳನ್ನು ಚಿರತೆ ಕಚ್ಚಿ ತಿಂದಿದೆ. ಇದರಿಂದ ದೇಹ ನೋಡಲು ಭಯಂಕರವಾಗಿದೆ ಎನ್ನಲಾಗಿದೆ. ಇನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಆಗಾಗ ಚಿರತೆ ದಾಳಿಗಳು ನಡೆಯುತ್ತಿದ್ದು, ಈ ಕುರಿತಂತೆ ಎಷ್ಟು ಬಾರಿ ದೂರು ನೀಡಿದರು ಪ್ರಯೋಜನವಾಗಲಿಲ್ಲ ಎಂದು, ಸ್ಥಳೀಯರು ದೂರಿದ್ದಾರೆ. ತಿಮ್ಮಪ್ಪ ಅವರ ಸಾವಿನ ಪ್ರಕರಣ ಸೋಮವಾರಪೇಟೆ ಠಾಣೆಯಲ್ಲಿ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

cheetah kodagu ಸೋಮವಾರಪೇಟೆ ಚಿರತೆ ದಾಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ