‘ನನ್ನಮಗ ಸಿಎಂ ಆಗಬೇಕೆಂಬುದಲ್ಲ ನನ್ನ ಆಸೆ’04-12-2017

ತುಮಕೂರು: ತುಮಕೂರಿನ ಕೊರಟಗೆರೆಯಲ್ಲಿನ ಜೆಡಿಎಸ್ ಸಮಾವೇಶದಲ್ಲಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಭಾಷಣದಲ್ಲಿ ಹೆಚ್.ಡಿ ದೇವೇಗೌಡರು, ಅಂಗನವಾಡಿ ಹೆಣ್ಣು ಮಕ್ಕಳಿಗೆ 10 ಸಾವಿರ ಪ್ರೋತ್ಸಾಹಧನ, 70 ವರ್ಷ ಮೇಲ್ಪಟ್ಟ ರೈತನಿಗೆ ಮಾಸಿಕ 5 ಸಾವಿರ ಸಹಾಯಧನ ನೀಡ್ತೇವೆ. ಜಾತಿಯ ಪ್ರಶ್ನೆ ಮೀರಿ ಪಕ್ಷ ಕೆಲಸ ಮಾಡುತ್ತಿದೆ ಎಂದರು.

ಗರ್ಭಿಣಿ ಸ್ತ್ರೀಯರಿಗೆ 6 ತಿಂಗಳು ಮಾಸಿಕ 6 ಸಾವಿರ ನೀಡ್ತೇವೆ, ಜೆಡಿಎಸ್ ದೇವೇಗೌಡರ ಕುಟುಂಬದ ಆಸ್ತಿಯಲ್ಲ, ಪಕ್ಷದ ಕಚೇರಿ ಹೋದಾಗ ಒಬ್ಬನೆ ಕುಳಿತು ಅತ್ತಿದಿನಿ, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಹೊರಟಿದ್ದೇನೆ, ನನ್ನ ಮಗ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಆಸೆಯಲ್ಲ, ನನ್ನ ರೈತರ ಕಣ್ಣೀರು ಒರೆಸಲು ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.

ಸಿಎಂ ಸಿದ್ಧರಾಮಯ್ಯ ಜೆಡಿಎಸ್ ಸತ್ತು ಹೋಗಿದೆ ಎಂದಿದ್ದರು, ಕೊರಟಗೆರೆ ಇತಿಹಾಸದಲ್ಲಿ ಈ ರೀತಿಯ ಸಭೆ  ನಾನು ನೋಡಿಲ್ಲ, ದೇವೇಗೌಡರ ಸೊಂಟ ಮುರಿಯೋದೆ ಬಾಕಿ ಎಂದಿದ್ದರು ಕೆಪಿಸಿಸಿ ಅಧ್ಯಕ್ಷರು, ದೇವೇಗೌಡರ ಸೊಂಟ ಸರಿಯಾಗಿದೆ ಎಂದು ತೋರಿಸಲು ಒಂದು ಗಂಟೆ ನಿಂತಿದ್ದೇನೆ, ಒಂದು ಗಂಟೆ ನಿಂತುಕೊಂಡೇ ಕೊರಟಗೆರೆಯಲ್ಲಿ ಪ್ರಚಾರ ನಡೆಸಿದ್ದೇನೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

H.D Deve Gowda Koratagere ಸಹಾಯಧನ ಗರ್ಭಿಣಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ