‘ಪ್ರತಾಪ್ ಸಿಂಹ ನಡೆಯನ್ನು ಖಂಡಿಸುತ್ತೇನೆ’04-12-2017 254

ನವದೆಹಲಿ: ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಹಿನ್ನೆಲೆ, ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಲ್ಲಿಂದು ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಬದುಕುತ್ತಿರುವ ನಾವು ಇತಿಮಿತಿಗಳನ್ನು ‌ಮೀರಬಾರದು, ಪ್ರತಿಭಟನೆ ಮಾಡುವುದು ಹಕ್ಕು, ಹಾಗಾಂತ ಕಾನೂನು ಉಲ್ಲಂಘಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.

ಕಾನೂನು ಉಲ್ಲಂಘನೆ ಹಿನ್ನೆಲೆ ಪೊಲೀಸ್ ಕ್ರಮ ತೆಗೆದುಕೊಂಡಿದ್ದಾರೆ, ಪ್ರತಾಪ್ ಸಿಂಹ ಮಾಡಿರುವ ನಡೆಯನ್ನು ನಾನು ಖಂಡಿಸುತ್ತೇನೆ, ಪ್ರತಾಪ್ ಸಿಂಹಾ ಇನ್ನು ಯುವಕ, ಅವರಿಗೆ ಸಂಯಮ ಅವಶ್ಯಕ ಎಂದಿದ್ದು, ಉಗ್ರ ಪ್ರತಿಭಟನೆ ಅಂದರೆ ಕಾನೂನು ಉಲ್ಲಂಘನೆ ಮಾಡುವುದಲ್ಲ ಶಾಂತಿಯುವ ಪ್ರತಿಭಟನೆ ಮಾಡಬೇಕು ಎಂದು ಹೇಳಿದರು.ಸಂಬಂಧಿತ ಟ್ಯಾಗ್ಗಳು

Dr.G.Parameshwara KPCC ಪ್ರತಿಭಟನೆ ಉಲ್ಲಂಘನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ