'ಕಾನೂನು ಎಲ್ಲರಿಗೂ ಒಂದೇ'



04-12-2017

ಚಿಕ್ಕಮಗಳೂರು: ನಿನ್ನೆ ದತ್ತಪೀಠದಲ್ಲಿ ನಡೆದ ಘಟನೆ ಕುರಿತಂತೆ, ಚಿಕ್ಕಮಗಳೂರಿನ ಎಸ್ಪಿ ಅಣ್ಣಾಮಲೈ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ನಿನ್ನೆ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಪ್ರಯೋಗ ಮಾಡಿದ್ದು, ಈ ವೇಳೆ ಪೊಲೀಸರು ಬಂದೋಬಸ್ತ್ ಮಾಡಲು ತೆರಳಿದಾಗ ಕಲ್ಲುಗಳು ಮತ್ತು ಒಂದು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ತಿಳಿಸಿದರು. ಸಾರಾಯಿ ಬಾಟಲ್ ನಲ್ಲಿ ಪೆಟ್ರೋಲ್ ಹಾಗೂ ಬಟ್ಟೆ ಸುತ್ತಿ ತಯಾರಿಸಿದ್ದ ಪೆಟ್ರೋಲ್ ಬಾಂಬ್ ನಂತೆ, ಸುಮಾರು ಐದು ಪೆಟ್ರೋಲ್ ಬಾಂಬ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದರು, ಮತ್ತು ಒಂದನ್ನು ಪ್ರಯೋಗಿಸಿದ್ದಾರೆ. ಘಟನೆಯು ತಡರಾತ್ರಿ ಚಿಕ್ಕಮಗಳೂರು ನಗರದ ತಮಿಳು ಕಲೋನಿಯಲ್ಲಿ ನಾಡೆದಿದೆ. ಸುಮಾರು 15 ರಿಂದ 18 ವಯಸ್ಸಿನ ಹುಡುಗರು ಕೃತ್ಯ ಎಸಗಿದ್ದು, ಘಟನೆಗೆ ಸಂಬಂಧಿಸಿದಂತೆ 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ  9 ಜನ ಯುವಕರು, ನಾಲ್ಕು ಜನ ಅಪ್ರಾಪ್ತರು ಎನ್ನಲಾಗಿದೆ. 

ರಷ್ಯಾ ದೇಶದಲ್ಲಿ ಬಳಸುವ ಮಾದರಿಯಲ್ಲಿಯೇ ಪೆಟ್ರೋಲ್ ಬಾಂಬ್ ತಯಾರಿಸಿದ್ದು, ಇವುಗಳನ್ನು ಕೇರಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಾಗಿ ಬಳಸುತ್ತಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಒಟ್ಟು ದತ್ತಪೀಠ ಘಟನೆ ಸಂಬಂಧ 32 ಜನರನ್ನು ವಶಕ್ಕೆ ಪಡೆದು, ನಾಲ್ಕು ಪ್ರಕರಣ ದಾಖಲಿಸಲಾಗಿದೆ ಎಂದರು.-

ಸಂಸದ ಪ್ರತಾಪ್ ಸಿಂಹ ಟ್ವೀಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ನಾವು ಎರಡು ಧರ್ಮದವರಿಗೂ ಸಮನಾದ ಭದ್ರತೆ ನೀಡುತ್ತೇವೆ, ರಾಜಕಾರಣಿಗಳು ಪ್ರತಿಕ್ರಿಯೆ ನೀಡುವುದು ಸಮಾನ್ಯ, ಕೆಲಸ ಮಾಡುವುದೇ ನಮ್ಮ ಬದ್ಧತೆ. ಕಾನೂನು ಎಲ್ಲರಿಗೂ ಒಂದೇ ಎಂದು ಖಡಕ್ ಉತ್ತರ ನೀಡಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ