ಎಟಿಎಂ ಕಾರ್ಡ್ ಬಳಸುವಾಗ ಎಚ್ಚರ....!

Be careful when using an ATM

04-12-2017

ಬೆಂಗಳೂರು: ಎಟಿಎಂ ಕೇಂದ್ರಗಳಿಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ ಕದಿಯುತ್ತಿದ್ದ ವಿದೇಶಿ ಜಾಲವನ್ನು ಭೇದಿಸಿರುವ ಸಿಐಡಿ ಅಧಿಕಾರಿಗಳು ರೊಮೇನಿಯಾ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ದೇವನಹಳ್ಳಿ ವಿಮಾನ ನಿಲ್ದಾಣ ಬಳಿ ವಾಸ್ತವ್ಯ ಹೊಡಿದ್ದ, ರೊಮೇನಿಯಾದ ಡಾನ್ ಸ್ಯಾಬಿಯನ್ ಕ್ರಿಶ್ಚಿಯನ್ ಮತ್ತು ಮಾರೆ ಜಾನೋಸ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಜಿ ರಸ್ತೆಯಲ್ಲಿರುವ ಕೋಟಕ್ ಮಹೀಂದ್ರ ಬ್ರಾಂಚ್ ಅಧಿಕಾರಿಗಳು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಿಐಡಿ ಸೈಬರ್ ಘಟಕದ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ವಿದೇಶಗಳಲ್ಲಿಯೂ ಪ್ರಕರಣಗಳಿರುವ ಮಾಹಿತಿ ದೊರೆತಿದ್ದು ಇಂಟರ್ ಪೋಲ್ ಮೂಲಕ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಜನಸಂದಣಿ ಕಡಿಮೆ ಇರುವ ಬೆಳಗಿನ ಜಾವ ಎಟಿಎಂನಲ್ಲಿ ಸ್ಕಿಮ್ಮಿಂಗ್ ಮಷಿನ್ ಇಟ್ಟು ಕಾರ್ಡ್ ಇಟ್ಟು, ಪಿನ್ ನಂಬರ್ ಎಂಟರ್ ಮಾಡುತ್ತಿದ್ದ ಆರೋಪಿಗಳು ಹಿಡನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಗಳಲ್ಲಿ ಕಂಡುಬಂದಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಬಳಿಯ ಕೋಟಕ್ ಮಹೀಂದ್ರಾ ಎಟಿಎಂ, ಎಂಜಿ ರೋಡ್‍ನಲ್ಲಿರೋ ಗರುಡಾ ಮಹಲ್‍ನ ಸಿಟಿ ಬ್ಯಾಂಕ್ ಎಟಿಎಂ, ಎಂಜಿ ರಸ್ತೆ ಕೆನರಾ ಬ್ಯಾಂಕ್ ಎಟಿಎಂ, ಟ್ರಿನಿಟಿ ಸರ್ಕಲ್‍ನಲ್ಲಿರುವ ಮೆಟ್ರೋ ಸ್ಟೇಷನ್‍ನ ಕೋಟಕ್ ಮಹೀಂದ್ರಾ ಎಟಿಎಂ, ಬ್ರಿಗೇಡ್ ರಸ್ತೆಯ ಕೋಟಕ್ ಮಹೀಂದ್ರಾ ಎಟಿಎಂಗಳಲ್ಲಿ ಡಾಟಾ ಕಳ್ಳತನ ಮಾಡಿ ಕಲೆ ಹಾಕಿದ ಡಾಟಾಗಳನ್ನು ಇಂಗ್ಲೆಂಡ್‍ನ ಸಹಚರರ ಜೊತೆ ಹಂಚಿಕೊಳುತ್ತಿದ್ದ ಮಾಹಿತಿ ತನಿಖೆಯಲ್ಲಿ ಕಂಡುಬಂದಿದೆ. ಎಲ್ಲಾ ಎಟಿಎಂಗಳಲ್ಲಿ ಕಾರ್ಡ್ ಬಳಕೆ ಮಾಡಿದ ಗ್ರಾಹಕರು ಪಿನ್ ಬದಲಾವಣೆ ಮಾಡಿಕೊಳ್ಳುವಂತೆ ಬ್ಯಾಂಕ್ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಸ್ಕಿಮ್ಮಿಂಗ್ ಮಷಿನ್: ಕಳ್ಳರು ಎಟಿಎಂ ಮಷಿನ್ ಮೇಲೆ ಹಿಡನ್ ಕ್ಯಾಮೆರಾ ಇಡಲಾಗುತ್ತದೆ ಕಾರ್ಡ್ ಸ್ಪೈಪ್ ಮಾಡುವ ಜಾಗದಲ್ಲಿ ಸಣ್ಣದೊಂದು ಕಾರ್ಡ್ ಹಾಕಲಾಗುತ್ತದೆ ಗ್ರಾಹಕರು ಸ್ಪೈಪ್ ಮಾಡಿದ ಕೂಡಲೇ ಕಾರ್ಡ್‍ನಲ್ಲಿದ್ದ ಮ್ಯಾಗ್ನೆಟ್ಟಿಂಗ್ ಸ್ಟ್ರೇಬ್ಸ್ ಹ್ಯಾಕ್ ಆಗಲಿದೆ, ಬಳಿಕ ಹಿಡನ್ ಕ್ಯಾಮೆರಾದಿಂದ ಪಾಸ್‍ ವರ್ಡ್‍ನ್ನು ಕ್ಯಾಪ್ಚರ್ ಮಾಡಲಾಗುತ್ತದೆ ಬಳಿಕ ನಕಲಿ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡಲಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

skimming machine ATM ವಿಮಾನ ನಿಲ್ದಾಣ ಸಿಐಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ