ಹಾಲು ಮತ್ತು ಮೊಸರಿನ ಧರ ಏರಿಸಿರುವುದನ್ನು ವಿರೋಧಿಸಿ ಪ್ರತಿಭಟನೆ

Kannada News

11-04-2017

ಬೆಂಗಳೂರು, ಏ.11: ಹಾಲು ಮತ್ತು ಮೊಸರಿನ ಧರ ಏರಿಸಿರುವುದನ್ನು ವಿರೋಧಿಸ ಸಿಪಿಎಂ ರಾಜಾಜಿನಗರ ವಲಯ ಸಮಿತಿ ವತಿಯಿಂದ ನವರಂಗ್ ಥಿಯೇಟರ್ ಸರ್ಕಲ್ ಬಳಿ ಮಂಗಳವಾರ  ಪ್ರತಿಭಟನೆ ನಡೆಸಲಾಯಿತು.ವಲಯ ಸಮಿತಿ ಸದಸ್ಯೆ ಕೆ.ಎಸ್. ಶಾರದಾ ಮಾತನಾಡಿ, ಈಗಾಗಲೇ ರಾಜ್ಯದ ಜನರು ಬರದಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲೇ  ಹಾಲು ಮತ್ತು ಮೊಸರಿನ ಬೆಲೆಯನ್ನು ಏರಿಸಿರುವುದರಿಂದ ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ಮಧ್ಯೆ ವಿದ್ಯುತ್ ದರವನ್ನೂ ಏರಿಸಿದ್ದು, ಬಡ ಜನರಿಗೆ ಮತ್ತೊಂದು ಹೊಡೆತ ನೀಡಿದಂತಾಗಿದೆ ಎಂದು ಅವರು ಆರೋಪಿಸಿದರು.
ಕೇಂದ್ರ ಸರ್ಕಾರ ಕೂಡ ಬ್ಯಾಂಕುಗಳಿಂದ ಹಣ ಪಡೆಯುವುದರ ಮೇಲೆ ನಿರ್ಬಂಧ, ಉಳಿತಾಯ ಖಾತೆಯ ಮೇಲಿನ ಕನಿಷ್ಠ ಮೊತ್ತದ ಠೇವಣಿ ಹಣದ ಮಿತಿ ಹೆಚ್ಚು ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಬರೆ ಎಳೆದಿದೆ. ಅಭಿವೃದ್ಧಿ ಹೆಸರಿನಲ್ಲಿ ಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಬೇಕು ಎಂಬ ನೆಪವೊಡ್ಡಿ ಜನಸಾಮಾನ್ಯರನ್ನು ದೋಚುವ ನೀತಿಗಳನ್ನು ಎರಡೂ ಸರ್ಕಾರಗಳು ಕೈಬಿಡಬೇಕು. ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ರೈತರ ಸಾಲವನ್ನು ತಕ್ಷಣ ಮನ್ನಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ಒಂದು ವರ್ಷದಿಂದ ಮಾಡಿರುವ ಗೃಹ ಮತ್ತು ಗ್ರಾಹಕ ಬಳಕೆಯ ದರ ಹೆಚ್ಚಳ ಹಿಂಪಡೆಯೇಕು. ಆರ್‍ಟಿಒ ಹೆಚ್ಚಿಸಿರುವ ಶುಲ್ಕ ಮತ್ತು ದಂಡ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ