ಮೌಲ್ವಿ ವಿರುದ್ಧ ದೂರು ದಾಖಲು

complaint against moulvi

04-12-2017

ಹುಬ್ಬಳ್ಳಿ: ಗಣೇಶಪೇಟೆಯೇ ಪಾಕಿಸ್ತಾನದಂತೆ ಕಾಣ್ತಿದೆ ಎಂದು, ಪ್ರಚೋದನಕಾರಿ ಹೇಳಿಕೆ ನೀಡಿದ ಮೌಲ್ವಿ ವಿರುದ್ಧ ಹುಬ್ಬಳ್ಳಿಯ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರ ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಅಬ್ದುಲ್ ಹಮೀದ್ ಖೈರಾತಿ ಮಾತನಾಡಿ, ಹುಬ್ಬಳ್ಳಿಯ ಗಣೇಶ್ ಪೇಟೆ ಪಾಕಿಸ್ತಾನದ ಹಾಗೆ ಕಾಣುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡುವಾಗ ಉತ್ತರ ವಲಯದ ಎಸಿಪಿ ದಾವೂದ್ ಖಾನ್ ಕೂಡ ಸ್ಥಳದಲ್ಲಿದ್ದರು. ಮೌಲ್ವಿಯ ಈ ಹೇಳಿಕೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎ.ಎನ್.ನಾಗರಾಜ್ ಸೂಚನೆ ಮೇರೆಗೆ ಮೌಲ್ವಿ ವಿರುದ್ಧ ಎಸಿಪಿ ದಾವೂದ್ ಖಾನ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಲಾಗಿದೆ‌. ಇಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ, ನಾವು ಒಗ್ಗಟ್ಟಿನಿಂದ ಹಾಗೂ ಎದೆ ಸೆಟೆದು ನಡೆದರೆ ನಮ್ಮ ತಂಟೆಗೆ ಯಾರೂ ಬರುವುದಿಲ್ಲ ಎಂದು ಮೌಲ್ವಿ ಹೇಳಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ