ಪ್ರತಾಪ್ ಸಿಂಹಗೆ ಎಸ್ಪಿ ಚನ್ನಣ್ಣನವರ್ ಟಾಂಗ್

I support ravi Anna: tong to simha

04-12-2017

ಹುಣಸೂರು ಹನುಮ ಜಯಂತಿ ಗಲಾಟೆ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರು ಎಸ್ಪಿ ಆಳುವ ಪಕ್ಷದ ಆಳು ಎಂದು ಟ್ಟೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಎಸ್ಪಿ ರವಿ.ಡಿ.ಚನ್ನಣ್ಣನವರ್ ಪರೋಕ್ಷ ಟಾಂಗ್ ನೀಡಿದ್ದಾರೆ. ನಾವು ಯಾರ ಪರವೂ ಅಲ್ಲ. ಯಾರ ವಿರುದ್ದವೂ ಅಲ್ಲ. ಸತ್ಯದ ಪರ. ಬಡವರ ಪರ. ಸರ್ವರ ಹಿತ ಕಾಯುವುದೇ ನಮ್ಮ ಉದ್ದೇಶ. ಸಂವಿಧಾನದ ನಿರ್ದೇಶನದಂತೆ ನಾವು ಕೆಲಸ ನಿರ್ವಹಿಸುತ್ತೇವೆ ಎಂದು ಮೈಸೂರು ಎಸ್ಪಿ ರವಿ.ಡಿ ಚನ್ನಣ್ಣನವರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಾವು ಎಂದೂ ಪರಿಪೂರ್ಣರಲ್ಲ. ಕಲಿಯುವುದು ಇದ್ದೆ ಇದೆ. ಎಸ್ಪಿ ಅಣ್ಣಾಮಲೈ ಅವರಿಂದ ಹಿಡಿದು ಪೇದೆಯವರೆಗೂ ಕಲಿಯುವುದು ಇದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ರವಿ ಅವರ ಅಭಿಮಾನಿಗಳು ಸಹ ಈಗ I support ravi Anna ಅನ್ನೋ ಪೋಸ್ಟರ್ ಹಾಕಿ ಬೆಂಬಲ ಸೂಚಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ravi Channannavar I support ravi Anna ಅಣ್ಣಾಮಲೈ ಟಾಂಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ