ಜೋಶಿ ವಿರುದ್ಧ ಲಿಂಗಾಯತರ ಆಕ್ರೋಶ

congress protest against prahlad joshi

04-12-2017

ಹುಬ್ಬಳ್ಳಿ: ಸಚಿವ ವಿನಯ್ ಕುಲಕರ್ಣಿ ತೇಜೋವಧೆಗೆ ಬಿಜೆಪಿ ನಾಯಕರು ಯತ್ನಿಸುತ್ತಿರುವುದಾಗಿ ಆರೋಪಿಸಿ, ಹುಬ್ಬಳ್ಳಿಯಲ್ಲಿ ಲಿಂಗಾಯತ ಸಮುದಾಯದವರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಲಿಂಗಾಯತ ನಾಯಕರಾಗಿ ಬೆಳೆಯುತ್ತಿರುವ ವಿನಯ ಕುಲಕರ್ಣಿ ‌ವಿರುದ್ಧ, ಸಂಸದ ಪ್ರಲ್ಹಾದ್ ‌ಜೋಶಿ ಷಡ್ಯಂತ್ರ ನಡೆಸಿದ್ದಾರೆ ಎಂದು, ಹುಬ್ಬಳ್ಳಿಯ ಬೆಂಗೇರಿ ತರಕಾರಿ ಮಾರುಕಟ್ಟೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಲಿಂಗಾಯತ ಸಮುದಾಯದವರು, ಬಿಜೆಪಿ ಸಂಸದ ಪ್ರಲ್ಹಾದ್ ಜೋಶಿ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದ ಪ್ರಲ್ಹಾದ್ ಜೋಶಿ ಮನೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ಮನೆ ಮುಂದೆ ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಂಡಿದ್ದು, ಜೋಶಿ ಮನೆಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪ್ರತಿಭಟನೆಯಲ್ಲಿ ಧಾರವಾಡ‌ ಸೇರಿ ಬೇರೆ‌‌ ಜಿಲ್ಲೆಗಳಿಂದಲೂ ಅನೇಕರು ಭಾಗವಹಿಸಿದ್ದಾರೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

prahlad joshi Lingayat ತೇಜೋವಧೆ ಮಾರುಕಟ್ಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ