'ಯಾವ ಅಪರಾಧಕ್ಕೆ ಪ್ರತಾಪರನ್ನು ಬಂಧಿಸಿದ್ರು’04-12-2017 505

ಮೈಸೂರು: ಸಿಎಂ ಸಿದ್ದರಾಮಯ್ಯ ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ರೋಪಿಸಿದ್ದಾರೆ. ಮೈಸೂರಿನಲ್ಲಿಂದು ಮಾತನಾಡಿದ ಅವರು, ಹನುಮ ಜಯಂತಿಗೆ ಹೊರಡುತ್ತಿದ್ದ ಪ್ರತಾಪ್ ಸಿಂಹರನ್ನು ತಡೆಯುವಂತಹ ಕೆಲಸವನ್ನು ಏಕೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ನಿನ್ನೆ ಚಿಕ್ಕಮಗಳೂರಿನಲ್ಲಿಯೂ ಕೂಡಾ ಹಿಂದುಗಳ ಮೇಲೆ ದೌರ್ಜನ್ಯವೆಸಗಿದ್ದಾರೆ, ಪ್ರತಾಪ್ ಸಿಂಹರನ್ನು ಬಂಧಿಸಿ ತಡರಾತ್ರಿಯವರೆಗೂ ಸುತ್ತಾಡಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಯಾವ ಅಪರಾಧಕ್ಕೆ ಪ್ರತಾಪ್ ಸಿಂಹರನ್ನು ಬಂಧಿಸಿದ್ರು? ಎಂದು ಆಕ್ರೋಶದಿಂದ ನುಡಿದಿದ್ದಾರೆ.

ಜನ ಪ್ರತಿನಿಧಿಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿಯುವ ಕೆಲಸ ಮಾಡ್ತಿದ್ದಾರೆ, ಹಿಂದುಗಳಿಗೊಂದು ನ್ಯಾಯ, ಮುಸಲ್ಮಾನರಿಗೊಂದು ನ್ಯಾಯವಿದೆ ರಾಜ್ಯದಲ್ಲಿ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೂಚನೆ ನೀಡಿದ್ದಾಗಿ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. ಆ ಹೇಳಿಕೆ ಹಳೆಯದ್ದು, ಅದರ ಬಗ್ಗೆ ನಾನು ಮಾತ್ನಾಡ್ಲಿಕ್ಕೆ ಬಂದಿಲ್ಲ ಎಂದ ಅವರು,  ಹನುಮಜಯಂತಿ ವೇಳೆ ಹಿಂದೂಗಳಿಗೆ ಧಕ್ಕೆ ತಂದಿದ್ದಾರೆ ಕಾಂಗ್ರೆಸ್ ನವರು, ಕೂಡಲೇ ಬಂಧಿಸಿರುವ ಹಿಂದೂ ಭಕ್ತರನ್ನು ಬಿಡುಗಡೆ ಮಾಡಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.ಸಂಬಂಧಿತ ಟ್ಯಾಗ್ಗಳು

Shobha Karandlaje public representativ ಜಯಂತಿ ಅಪರಾಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ