'ನಾವು ಸುಮ್ಮನಿರಲ್ಲ ಹೋರಾಟ ಮಾಡ್ತೇವೆ'04-12-2017

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ರಾವಣ ರಾಜ್ಯದ ಆಡಳಿತ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಆರೋಪಿಸಿದ್ದಾರೆ. ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹುಣಸೂರಿನಲ್ಲಿ ಹನುಮ ಜಯಂತಿಗೆ ಅನುಮತಿ ನೀಡಿಲ್ಲ. ಟಿಪ್ಪು ಜಯಂತಿ, ಹಿದ್ ಮಿಲಾದ್ ಮೆರವಣಿಗೆ ನಡೆಯಬಹುದು. ಆದರೆ ಹುನುಮ ಜಯಂತಿಗೆ ಮರವಣಿಗೆ ಮಾತ್ರ ಮಾಡಬಾರದು ಇದು ಎಷ್ಟು ಸರಿ.? ಎಂದು ಪ್ರಶ್ನಿಸಿದ್ದಾರೆ.

ಪುರಾಣದಲ್ಲಿ ಕರ್ನಾಟಕವನ್ನು ಹುನುಮನ ನಾಡಿ ಎಂದು ಕರೆದಿದ್ದರೆ, ಕರ್ನಾಟಕದಲ್ಲಿ ಕೋಮು ಸೌಹಾರ್ದೆತೆ ಕದಡಲು ಮುಖ್ಯ ಕಾರಣ ಸಿಎಂ ಎಂದು, ನೇರವಾಗಿ ಆರೋಪಿಸಿದ್ದಾರೆ. ಹಿಂದುಗಳ ಕಾರ್ಯಕ್ರಮಕ್ಕೆ‌ ತಡೆ, ನಿಷೇಧ ನೀಡಿರುವ ರಾಜ್ಯ ಸರಕಾರ ಒಂದು‌ ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಾಕುತ್ತಿದೆ ಎಂದು ಆಕ್ರೋಶದಿಂದ ನುಡಿದಿದ್ದಾರೆ.

19 ಹಿಂದು ಯುವಕರ ಕಗ್ಗೊಲೆಯಾಗಿದೆ, ಹತ್ಯೆಯ ಹಿಂದೆ ಹಲವು ಸಂಘಟನೆಗಳ ಕೈವಾಡ ಇದ್ದರೂ ರಾಜ್ಯ ಸರ್ಕಾರ ಸುಮ್ಮ‌ನಿದೆ, ಸಿದ್ದರಾಮಯ್ಯ ನವರು ಸೌಜನ್ಯಕ್ಕಾದರೂ ಹತ್ಯೆಯಾದವರ ಮನೆಗೆ ಭೇಟಿ ನೀಡಿಲ್ಲ ಎಂದು ವ್ಯಕ್ತಪಡಿಸಿದ್ದಾರೆ. ಹನುಮನ ಭಕ್ತರ ಮತ್ತು ಅದರಲ್ಲೂ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧನದ ವಿಚಾರಕ್ಕೆ ಸಂಬಂಧಿಸಿ, ಸಂಸದರನ್ನು ಬಂಧನ ‌ಮಾಡಿದ ಕೊಡಲೆ ಸಭಾಪತಿಗೆ ದೂರು ನೀಡಬೇಕು. ಇದರ ಬಗ್ಗೆ ನಾವು ಸುಮ್ಮನಿರಲ್ಲ, ಜನರ ನಡುವೆ ತೆಗೆದುಕೊಂಡು ಹೋರಾಟ ಮಾಡುತ್ತೇವೆ, ಮತ್ತು ಸಂಸತ್ ಅಧಿವೇಶನದಲ್ಲೂ ಈ ಬಗ್ಗೆ, ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

central minister Ananth Kumar ಕರ್ನಾಟಕ ಅತಿಥಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ