ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಕೆ

Kannada News

11-04-2017

ಬೆಂಗಳೂರು,ಏ,11:ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ, ರೈತರಿಗೆ ವಿದ್ಯುತ್‍ಗಾಗಿ ನೀಡುವ ಸಬ್ಸಿಡಿ ಹಣವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡುವಂತೆ ಸಲಹೆ ಮಾಡಿದೆ.
ಅಡುಗೆ ಅನಿಲ ಸಿಲಿಂಡರ್, ರಸಗೊಬ್ಬರ ಮತ್ತಿತರ ವಲಯಗಳಲ್ಲಿ ನೀಡುತ್ತಿರುವ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರ ಹೇಗೆ ನೇರವಾಗಿ ಖಾತೆದಾರರಿಗೆ ಜಮಾ ಮಾಡುತ್ತಿದೆಯೋ ಅದೇ ರೀತಿಯಲ್ಲಿ ಕೃಷಿ ಪಂಪ್‍ಸೆಟ್ ಹೊಂದಿರುವವರ ಖಾತೆಗೆ ಹಣ ಪಾವತಿ ಮಾಡುವುದು ಸೂಕ್ತ.
ಕೃಷಿ ಪಂಪ್ ಸೆಟ್ ಇರುವವರು  ಮೀಟರ್ ಅಳವಡಿಸಿಕೊಂಡು ತಾವು ಬಳಸುವ ವಿದ್ಯುತ್‍ಗೆ ಬಿಲ್ ಪಾವತಿಸಬೇಕು. ಬಿಲ್ ಪಾವತಿಸುವವರಿಗೆ ಸರ್ಕಾರ ಸಬ್ಸಿಡಿ ಹಣವನ್ನು ನೇರವಾಗಿ ಎಸ್ಕಾಂಗಳಿಗೆ ನೀಡುವ ಬದಲು ರೈತರ ಖಾತೆಗಳಿಗೆ ವರ್ಗಾಯಿಸುವುದು ಒಳ್ಳೆಯದು ಎಂದು ಹೇಳಿದೆ.
ರಾಜ್ಯದಲ್ಲಿ ಅಂದಾಜಿನಂತೆ 25 ಲಕ್ಷ ಕೃಷಿ ಪಂಪ್ ಸೆಟ್‍ಗಳಿವೆ. ಆದರೆ ಸುಮಾರು ಐದು ಲಕ್ಷ ಕೃಷಿ ಪಂಪ್‍ಸೆಟ್‍ಗಳು ವಿದ್ಯುತ್ ಬಳಕೆ ಮಾಡುತ್ತಿರುವ ಬಗ್ಗೆ ಲೆಕ್ಕ ಸಿಗುತ್ತಿಲ್ಲ. ಮೀಟರ್ ಅಳವಡಿಸಿದರೆ ನಿಜವಾದ ಲೆಕ್ಕ ಸಿಗಲಿದೆ. ಇದರಿಂದ ಸೋರಿಕೆ ತಡೆಗಟ್ಟಬಹುದು ಎನ್ನುವುದು ಆಯೋಗದ ನಿಲುವಾಗಿದೆ.
ಕೆಲ ರೈತರು ಎರಡರಿಂದ ಮೂರು ಕೃಷಿ ಪಂಪ್‍ಸೆಟ್‍ಗಳನ್ನು ಬಳಸುತ್ತಿದ್ದಾರೆ. ಆದರೆ ಈಗಿರುವ ವ್ಯವಸ್ಥೆಯ ಪ್ರಕಾರ ವಿದ್ಯುತ್ ಬಳಕೆಯ ಬಗ್ಗೆ ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮೀಟರ್ ಅಳವಡಿಕೆಯೊಂದೇ ಮಾರ್ಗವಾಗಿದೆ. ಇದನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು ಎಂದು ಆಯೋಗ ಕಿವಿಮಾತು ಹೇಳಿದೆ.

Links :ಟಾಪ್ ಪ್ರತಿಕ್ರಿಯೆಗಳು


ಅಕ್ರಮ ಪಂಪ್ ಸೆಟ್ ಮೀಟರ್ ಅಳವಡಿಸಿ ಕಾಂಟ್ರಾಕ್ಟ್ ಅವಳಿ ನಿಲ್ಲಿಸಿ ನಿಜವಾದ ರೈತರಿಗೆ ನಿಮ್ಮ ಕೊಡುಗೆ ನಾನು ಪಂಪ್ ಸೆಟ್ ರೆಡಿ ಇದೆ KEB ಅವರೆಗೆ 19000/ ಕೋಟೆದನೇ ಆದ್ರೆ ಅವರು 15683/ ಬಿಲ್ ಕೆಟ್ಟದಾಗಿ ಕೋಟೇದರೆ ಆದ್ರೆ ಪಂಪ್ ಸೆಟ್ T C ಓವರ್ ಲೋಡ್ ಅಂತ ನಮಗೆ ಕನೆಕ್ಷನ್ ಕೊಡುತಾಈಲ ಪಂಪ್ ಸೆಟ್ ಮೋಟರ್ KEB ಗೆ ಅಂತ 150000/ ಖರ್ಚು ಸುಮ್ನೆ ರೈತ C M Thanks Shivashankar ಮಂಡ್ಯ ಮಳವಳ್ಳಿ (ತಾ ) ಬಿ ಜಿ ಪುರ ಮೊಬೈಲ್ : 8892885488 ಬಿ ಜಿ ಪುರ
  • ಶಿವಶಂಕರ್
  • ರೈತ