‘ತಪ್ಪು ಮಾಡಿದವರನ್ನು ಬಂಧಿಸುವುದರಲ್ಲಿ ತಪ್ಪಿಲ್ಲ’

siddaramaiah reply on pratap simha arrest

04-12-2017

ನವದೆಹಲಿ: ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಹಿನ್ನೆಲೆ, ನವದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಕಾನೂನು ಉಲ್ಲಂಘನೆ ಮಾಡುವವರನ್ನು ಬಂಧನ ಮಾಡುವುದರಲ್ಲಿ ಯಾವ ತಪ್ಪಿಲ್ಲ, ಹನುಮ ಜಯಂತಿಗೆ ನಾವು ಆಕ್ಷೇಪ ಮಾಡಿರಲಿಲ್ಲ, ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ಹಿನ್ನೆಲೆ, ಪೊಲೀಸರು ಮೆರವಣಿಗೆಗೆ ಮಾರ್ಗ ಸೂಚಿ ನೀಡಿದ್ದರು. ಆದರೆ ಅದನ್ನು ಪಾಲಿಸದೇ ಪ್ರತಾಪ್ ಸಿಂಹ ತಮ್ಮ ಹೊಸ ಮಾರ್ಗಕ್ಕಾಗಿ ಪಟ್ಟು ಹಿಡಿದರು. ಪೊಲೀಸ್ ಬಂದೋಬಸ್ತ್ ಇಲ್ಲದೆ ಅವರು ಕೇಳಿದ ಕಡೆಯಲ್ಲ ಅವಕಾಶ ಕೊಡಲು ಹೇಗೆ ಸಾಧ್ಯ, ಕೋಮು ಗಲಭೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ನಿಯಮ ಉಲ್ಲಂಘಿಸಿ ಪೊಲೀಸರು ಹಾಕಿದ ಬ್ಯಾರಿಕೇಡ್ ಮೇಲೆ ಕಾರು ಚಲಾವಣೆ ಮಾಡಿದ್ದಾರೆ ಪ್ರತಾಪ್ ಸಿಂಹ, ಕಾನೂನು ಮಾಡುವ ನಾವು ಕಾನೂನು ಗೌರವಿಸದೇ ಉಲ್ಲಂಘನೆ ಮಾಡಿದರೆ ಹೇಗೆ..? ಒಬ್ಬ ಸಂಸದನಾಗಿ ಪ್ರತಾಪ್ ಸಿಂಹ ಮಾಡಿದ್ದು ಸರಿಯಾ ಕೇಳಿದ್ದಾರೆ. ಪ್ರತಾಪ್ ಸಿಂಹ ಮೇಲೆ ಜಾಮೀನು ರಹಿತಕೇಸ್ ಗಳು ದಾಖಲಾಗಿವೆ, ಸಂಸದರಾದ ಹಿನ್ನೆಲೆ, ಅವರನ್ನ ಬಿಟ್ಟು ಕಳಿಸಲಾಗಿದೆ ಎಂದರು. ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ತರಾಟೆ ತೆಗೆದುಕೊಂಡಿರುವುದರಿಂದ ಹೈಕಮಾಂಡ್ ಮೆಚ್ಚಿಸಲು ಪ್ರತಾಪ್ ಸಿಂಹ ಹೀಗೆ ಮಾಡುತ್ತಿರಬಹುದು ಎಂದುರು.


ಸಂಬಂಧಿತ ಟ್ಯಾಗ್ಗಳು

Pratap Simha New Delhi ಅಮಿತ್ ಷಾ ಸಂಸದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ