ಬುದ್ಧಿಮಾಂದ್ಯನ ಬರ್ಬರ ಕೊಲೆ

Horrific murder in Hassan

04-12-2017

ಹಾಸನ: ಬುದ್ಧಿಮಾಂದ್ಯನೊಬ್ಬನನ್ನು ಬರ್ಬರವಾಗಿ ಕೊಲೆಮಾಡಿರುವ ಘಟನೆಯು, ಹಾಸನದ ರಾಷ್ಟ್ರೀಯ ಹೆದ್ದಾರಿ ಅರಳಾಪುರದ, ಚನ್ನರಾಯಪಟ್ಟಣ ಬೈಪಾಸ್ ಬಳಿ ನಡೆದಿದೆ. ಪುಟ್ಟಸ್ವಾಮಿ(35)ಕೊಲೆಯಾದ ಬುದ್ಧಿಮಾಂದ್ಯ ವ್ಯಕ್ತಿ ಎಂದು ಗುರುತಿಸಲಾಗಿದೆ. ಪುಟ್ಟಸ್ವಾಮಿಯನ್ನು ವಿವಸ್ತ್ರಗೊಳಿಸಿ, ಕೈ- ಕಾಲು ಮತ್ತು ತಲೆಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯನ್ನಾಧರಿಸಿ, ಸ್ಥಳಕ್ಕೆ ಭೇಟಿ ನೀಡಿದ ಚನ್ನರಾಯಪಟ್ಟಣದ ನಗರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.  ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Murder channarayapatna ಬುದ್ಧಿಮಾಂದ್ಯ ಬೈಪಾಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ