‘ಪಕ್ಷದಲ್ಲಿ ಗೊಂದಲಗಳಿರುವುದು ನಿಜ’-ಈಶ್ವರಪ್ಪ04-12-2017

ಬಾಗಲಕೋಟೆ: ಪರಿವತ೯ನಾ ಯಾತ್ರೆ ವೇಳೆ ಉಂಟಾಗುತ್ತಿರುವ ಭಿನ್ನಮತದ ವಿಚಾರದ ಕುರಿತಂತೆ ಬಾಗಲಕೋಟೆಯಲ್ಲಿ, ವಿಧಾನ ಪರಿಷತ್ ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಪಕ್ಷದಲ್ಲಿ ಭಿನ್ನಮತ ಇರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಪಕ್ಷ ಬೆಳೆಯುತ್ತಿರುವುದರಿಂದ ಅಶಿಸ್ತು ಗೊಂದಲಗಳಿರೋದು ನಿಜ, ಅವುಗಳನ್ನೆಲ್ಲಾ ಬಗೆಹರಿಸಿಕೊಂಡು ಮುನ್ನಡೆಯುತ್ತೇವೆ ಎಂದಿದ್ದಾರೆ. ಯಡಿಯೂರಪ್ಪನವರನ್ನ ಮುಂದಿನ ಮುಖ್ಯಮಂತ್ರಿಯನ್ನಾಗಿಸುತ್ತೇವೆ, ಹೋದಲ್ಲೆಲ್ಲಾ ಯಾತ್ರೆ ವೇಳೆ ಚಿಕ್ಕ ಪುಟ್ಟ ಗಲಾಟೆಗಳಾಗ್ತಿರೋದು ಪಕ್ಷ ಅಧಿಕಾರಕ್ಕೆ ಬರುವುದರ ಮುನ್ಸೂಚನೆ ಎಂದರು.

ಇನ್ನು ಸಂಸದ ಪ್ರತಾಪ ಸಿಂಹ ಅವರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ, ಸಿಎಂ ಹಿಂದೂಗಳಿಗೊಂದು, ಮುಸ್ಲಿಂರಿಗೊಂದು ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಹಿಂದೂಗಳ ಹನುಮ ಮತ್ತು ದತ್ತ ಜಯಂತಿಗೆ ಅಡ್ಡಿ ಮಾಡಿದ್ಯಾಕೆ..? ಅಡ್ಡಿಯಾಗಿದ್ದರಿಂದಲೇ ಈ ಸಮಸ್ಯೆ ಉಂಟಾಗಿದೆ, ಹುಣಸೂರಿನ ಕಾಯ೯ಕ್ರಮಕ್ಕೆ ಅನುಮತಿ ನೀಡುವುದರಲ್ಲಿ ತಪ್ಪೇನಿತ್ತು ಎಂದು ಪ್ರಶ್ನಿಸಿದ್ದಾರೆ.

ವೀರಶೈವ- ಲಿಂಗಾಯತರನ್ನು ಬೇಪ೯ಡಿಸಿರುವ ಸಿದ್ದರಾಮಯ್ಯ ನಾಡಿನ ಹಿಂದುಗಳ ಕ್ಷಮೆ ಕೇಳಲಿ ಎಂದಿದ್ದಾರೆ. ಅಲ್ಲದೇ  ಜಿ.ಪಂ.ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದ ಕುರಿತು, ಈ ಬಗೆಗಿನ ತನಿಖೆ ಅನುಮಾನದಲ್ಲಿ ನಡೆಯುತ್ತಿದೆ, ಕೊಲೆಗಡುಗರನ್ನು ಸಿಎಂ ರಕ್ಷಣೆ ಮಾಡುತ್ತಿರೋದ್ಯಾಕೆ? ರಾಜ್ಯದ ಸಿಎಂ ಜನರ ಮುಂದೆ ಸತ್ಯ ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ