ಕೋಲಾರದಲ್ಲಿ ಕಾಡಾನೆಗಳ ದಾಳಿ

Elephants attack in Kolar

02-12-2017

ಕೋಲಾರ : ಕಾಡಾನೆಗಳ ದಾಳಿಗೆ ಅಪಾರ ಪ್ರಾಮಾಣದಲ್ಲಿ ತೋಟದ ಬೆಳೆಗಳು ಹಾನಿಯಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಗಡಿಭಾಗವಾದ ಕಾಮಸಮುದ್ರ ,ಭೀಮಗಾನಹಳ್ಳಿ ಸರಿದಂತೆ ಕಾಡಾನೆಗಳು ಹದಿನೈದು ದಿನಗಳಿಂದ  ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಅತ್ತ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯಕ್ಕೆ ಸಂಪರ್ಕ ಹೊಂದಿದೆ. ಹಾಗಾಗಿ ಈ ಭಾಗದಲ್ಲಿ ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳು ಆಗಾಗ ಬಂದು ಹೀಗೆ ರಂಪಾಟ ಮಾಡಿ ಹೋಗುತ್ತವೆ.ಈ ಹಿಂದೆಯೂ, ಪ್ರತಿ ವರ್ಷ ಹತ್ತಾರು ಆನೆಗಳು ಇಲ್ಲಿಗೆ ಆಹಾರ ನೀರಿಗಾಗಿ ವಲಸೆ ಬರುತ್ತಿದ್ದು, ಆನೆಗಳಿಂದಾಗಿ ರೈತರು ಬೆಳೆದ ಬೆಳೆಗಳ ಜೊತೆಗೆ ಪ್ರಾಣಾಪಾಯಗಳೂ ಕೂಡ ಆಗಿವೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕಾಡಾನೆಗಳ ಹಿಂಡನ್ನ ನೆರೆಯ ಆಂಧ್ರ ಅಥವಾ ತಮಿಳುನಾಡಿನತ್ತ ಓಡಿಸುವ ಪ್ರಯತ್ನ ಸತತವಾಗಿ ನಡೆಸುತ್ತಿದ್ದಾರೆ. ಅದ್ರೆ ಆನೆಯಿಂದ ಬೆಳೆ ಕಳೆದುಕೊಂಡ ರೈತರಿಗೆ ಮಾತ್ರ ಕಿಂಚಿತ್ತೂ ಪರಿಹಾರ ಸಿಕ್ಕಿಲ್ಲ ಅನ್ನೋದು ಗಡಿ ಭಾಗದ ರೈತರ ಅಳಲು.
ಒಟ್ಟಾರೆ ಆಹಾರ ನೀರಿಗಾಗಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಕಾಡು ಪ್ರಾಣಿಗಳಿಂದ ಪದೇ ಪದೇ ಹೀಗೆ ಸಂಕಷ್ಟಕ್ಕೆ ತುತ್ತಾಗುತ್ತಿರುವ ಜನರ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಕಾಡು ಪ್ರಾಣಿಗಳು ಗ್ರಾಮಗಳ ಮೇಲೆ ದಾಳಿ ಮಾಡದಂತೆ ಎಚ್ಚರಿಕೆ ವಹಿಸಬೇಕು, ಇದೆಲ್ಲದಕ್ಕಿಂತ ಮುಖ್ಯವಾಗಿ ಹಾನಿಗೊಳಗಾದ ರೈತರಿಗೆ ಸರಿಯಾದ ಪರಿಹಾರ ನೀಡಬೇಕು ಅನ್ನೋದು ಗಡಿಭಾಗದ ರೈತರ ಅಳಲು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ