ಕುಡಿದು ಆಂಬುಲೆನ್ಸ್ ಚಲಾಯಿಸುತ್ತಿದ್ದ ಚಾಲಕ

Driving a drunk ambulance

02-12-2017

ಬೆಂಗಳೂರು, ಡಿ.2- ಕೆ ಆರ್ ವೃತ್ತದ ಬಳಿ ನಿನ್ನೆ ಮಧ್ಯರಾತ್ರಿ ಕಂಠಪೂರ್ತಿ ಕುಡಿದು ಆಂಬುಲೆನ್ಸ್ ಚಲಾಯಿಸುತ್ತಿದ್ದ ಚಾಲಕನನ್ನು ಪತ್ತೆಹಚ್ಚಿರುವ ಹಲಸೂರು ಗೇಟ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಅಂಬುಲೆನ್ಸ್ನ್ನು ವಶಪಡಿಸಿಕೊಂಡಿದ್ದಾರೆ.
ಕೆಆರ್ ಸರ್ಕಲ್ ಮಾರ್ಗವಾಗಿ ಸೈರನ್ ಹಾಕಿಕೊಂಡು ರಾತ್ರಿ 1ರ ವೇಳೆ ವೇಗವಾಗಿ ಬರುತ್ತಿದ್ದ ಆಂಬುಲೆನ್ಸ್ನ್ನು ತಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಯಾವುದೇ ರೋಗಿ ಇಲ್ಲದಿರುವುದು ಪತ್ತೆಯಾಗಿದೆ.
ಚಾಲಕನ ಬಾಯಿಗೆ ಆಲ್ಕೋಮೀಟರ್ ಇಟ್ಟು ತಪಾಸಣೆ ನಡೆಸಿದಾಗ ಮಿತಿಮೀರಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದ್ದು, ಕೂಡಲೇ ಚಾಲಕ ಯಶ್ವಂತ್ ಮೇಲೆ ಪ್ರಕರಣ ದಾಖಲಿಸಿ ಆಂಬುಲೆನ್ಸ್ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆಂಬುಲೆನ್ಸ್ ವಿಜಯನಗರದ ಪುಷ್ಪ ಮಲ್ಟಿ ಸ್ಪೆಷಾಸಿಟಿ ಆಸ್ಪತ್ರೆಗೆ ಸೇರಿದ್ದಾಗಿದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ