ಮೈಸೂರಿನ ಪಾಲಿಕೆ ಸದಸ್ಯ ಪುತ್ರಿ ಆತ್ಮಹತ್ಯೆ

suicide

02-12-2017

ಬೆಂಗಳೂರು,ಡಿ.2-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಪ್ತ ಮೈಸೂರಿನ ಪಾಲಿಕೆ ಸದಸ್ಯ ನಾಗಭೂಷಣ್ ಪುತ್ರಿ ವನಿತಾ ಅವರು ನಿನ್ನೆ ರಾತ್ರಿ  ಆತ್ಮಹತ್ಯೆ ಶರಣಾಗಿದ್ದು ಪ್ರಕರಣಕ್ಕೆ ಸಂಬಂಧ ಮೃತರ ಪತಿ ವಸಂತ್ ಹಾಗು ಅತ್ತೆ ಗಾಯತ್ರಿಯನ್ನು ಹೆಚ್‍ಎಸ್‍ಆರ್ ಲೇಔಟ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಹೆಚ್‍ಎಸ್‍ಆರ್ ಲೇಔಟ್ 25ನೇ ಕ್ರಾಸ್‍ನ ಮನೆಯಲ್ಲಿ ನಿನ್ನೆ ಸಂಜೆ 6.30ರ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ವನಿತಾ(27)ನೇಣಿಗೆ ಶರಣಾಗಿದ್ದು ಪತಿ ವಸಂತ್ ರಾತ್ರಿ 8ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಆತ್ಮಹತ್ಯೆ ಬೆಳಕಿಗೆ ಬಂದಿತ್ತು.
ಆತ್ಮಹತ್ಯೆಗೂ ಮುನ್ನ ವನಿತಾ ಅವರು 4 ಪುಟಗಳ ಡೆತ್‍ನೋಟ್ ಬರೆದಿಟ್ಟು ನನ್ನ ಅತ್ತೆ ಗಾಯತ್ರಿ ಪ್ರತಿನಿತ್ಯ ಮನೆಯಲ್ಲಿ ಕಿರುಕುಳ ನೀಡುತಿದ್ದಾರೆ. ಅಪ್ಪನ ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಾರೆ. ಸರಿಯಾಗಿ ಊಟ ತಿಂಡಿಯನ್ನು ಸಹ ನೀಡದೆ ಹಿಂಸೆ ನೀಡುತ್ತಿದ್ದಾರೆ. ಇದರಿಂದ ನಾನು ಬೇಸತ್ತು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಹೆಚ್‍ಎಸ್‍ಆರ್ ಲೇಔಟ್ ಪೊಲೀಸರು ಡೆತ್‍ನೋಟ್ ಪರಿಶೀಲಿಸಿ ಪತಿ ವಸಂತ್ ಹಾಗು  ಅತ್ತೆ ಗಾಯತ್ರಿಯನ್ನು  ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.
ಆರು ತಿಂಗಳ ಹಿಂದೆಯಷ್ಟೇ ತಮಿಳುನಾಡು ಮೂಲದ ಮರ್ಸಿಡಿಸ್ ಕಂಪನಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದ ವಸಂತ್ ಎಂಬವರ ಜೊತೆ ವಿವಾಹವಾಗಿದ್ದ ವನಿತಾ  ಹೆಚ್‍ಎಸ್‍ಆರ್ ಲೇಔಟ್ 25ನೇ ಕ್ರಾಸ್‍ನ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದರು.ಡಾಕ್ಟರೇಟ್ ಪದವಿಗೆ ಸಿದ್ದತೆ ನಡೆಸಿದ್ದ ಎರಡು ಡಿಗ್ರಿಗಳನ್ನು ಪಡೆದಿದ್ದ ವನಿತಾ ಅತ್ತೆಯ ಕಿರುಕುಳಕ್ಕೆ ನೊಂದು ನೇಣಿಗೆ ಶರಣಾಗಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ