ಗುಂಡ್ಲುಪೇಟೆಗೆ ಉಪೇಂದ್ರ ಭೇಟಿ

Upendra visits Gundlupete

02-12-2017

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಗತಗೌಡಹಳ್ಳಿಗೆ ಉಪೇಂದ್ರ ಭೇಟಿನೀಡಿ, ನಾನು ಯಾವ ಪಕ್ಷವನ್ನು ದೂರುವುದಿಲ್ಲ. ಎಲ್ಲ ಕ್ಷೇತ್ರಗಳಿಂದಲೂ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಸಮರ್ಥ ಹಾಗೂ ಯೋಗ್ಯ ವ್ಯಕ್ತಿ ಗಳಿಗೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದು, ಚಾಮರಾಜನಗರ ಕಾಂಗ್ರೆಸ್ ಭದ್ರಕೋಟೆಯಾದರೂ ಜನರ ತೀರ್ಮಾನವೇ ಅಂತಿಮ. ಚಾಮರಾಜನಗರ ಜಿಲ್ಲೆಯ ಜನತೆ ಪ್ರಜಾಕೀಯಾ ಪಕ್ಷವನ್ನು ಬೆಂಬಲಿಸಲಿದ್ದಾರೆ. ಯಾರನ್ನೂ ಟೀಕಿಸದೇ ಚುನಾವಣೆ ಎದುರಿಸುವುದೇ ನಮ್ಮ ಸಿದ್ದಾಂತ, ಮಾಧ್ಯಮದವರಿಗೆ ವಿಷಯ ತಿಳಿಸದೆ ಪ್ರವಾಸ ಮಾಡ್ತಾ    ಇದ್ದೇನೆ, ನಾನು ಮಾಧ್ಯಮದ ಪ್ರಚಾರ ಪಡೆದುಕೊಳ್ಳುತ್ತಿಲ್ಲ ಎಂದು  ನಟ ಹಾಗೂ ಪ್ರಜಾಕಿಯ ಪಕ್ಷದ ಸ್ಥಾಪಕ ಉಪೇಂದ್ರ ಹೇಳಿಕೆ ನೀಡಿದರು.

 


 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ