ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಕಚೇರಿ ಜಪ್ತಿ

Kannada News

11-04-2017

ಮೈಸೂರು ಎರಡನೇ  ಜೆಎಂಎಫ್ ಸಿ ನ್ಯಾಯಾಲಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನ ಕಚೇರಿ ರೈತರ ಭೂ ಸ್ವಾಧೀನಕ್ಕೆ ನೀಡಬೇಕಾಗಿದ್ದ ಪರಿಹಾರವನ್ನ ನೀಡದೆ ಸತಾಯಿಸುತ್ತಿತ್ತು,  ಇಲ್ಲಿನ ಉತ್ತನ ಹಳ್ಳಿ ಗ್ರಾಮದ ಕರಿಯಪ್ಪ ಎಂಬ ರೈತರೋರ್ವರ ಎರಡು ಎಕರೆ 24 ಗುಂಟೆ ಜಮೀನನ್ನು 1997ರಲ್ಲಿ ಭೂ-ಸ್ವಾಧಿನ ಪಡೆದುಕೊಂಡು ಶೇ. 25ರಷ್ಟು ಹಣ ನೀಡಿದ್ದು, 10 ವರ್ಷವಾದರೂ ಬಾಕಿ ಹಣ ನೀಡಿರಲಿಲ್ಲ.  ಅಲೆದೂ ಅಲೆದೂ ಸುಸ್ತಾದ  ಕರಿಯಪ್ಪ  ಈಗಿನ ಮಾರ್ಕೆಟ್ ದರದಲ್ಲಿ 1.3 ಲಕ್ಷಕ್ಕೂ ಹೆಚ್ಚು ಹಣ ನೀಡಬೇಕೆಂದು ಮೈಸೂರಿನ ಎರಡನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಈ ಸಂಬಂಧ ದಾವೆ ಹೂಡಿದ್ದರು ಎನ್ನಲಾಗಿದೆ. ನ್ಯಾಯಾಲಯ ದಾವೆಯನ್ನು ಪರಿಶೀಲಿಸಿ ರೈತನಿಗೆ ತಕ್ಷಣ ಬಾಕಿ ಹಣ ನೀಡುವಂತೆ ಆದೇಶ ನೀಡಿತ್ತು.

ಆದರೆ  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಈ ಆದೇಶವನ್ನು ಸಂಪೂರ್ಣ  ನಿರ್ಲ ಕ್ಷಿಸಿತ್ತು. ಅದಕ್ಕಾಗಿ ವಿಶೇಷ ಭೂ ಅಧಿ ಕಾರಿಗಳ ಕ್ರಮದ ಕುರಿತು ಕೋರ್ಟ್ ನಲ್ಲಿ ಪುನಃ ದಾವೆ ಹೂಡಲಾಗಿತ್ತು. ನ್ಯಾಯಾಲಯ  ಇದರಿಂದ ಭೂ ಸ್ವಾಧಿನ ಕಚೇ ರಿಯನ್ನು  ಜಫ್ತಿ ಮಾಡುವಂತೆ ಆದೇಶ ನೀಡಿತ್ತು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ