ಓಖಿ ಎಫೆಕ್ಟ್  

Okhi Effect

02-12-2017

ರಾಮನಗರ: ಓಖಿ ಚಂಡಮಾರುತ ಎಫೆಕ್ಟ್  ನ ಹಿನ್ನೆಲೆ ಇಂದು ಕೂಡ ರಾಮನಗರ ಜಿಲ್ಲೆಯಾದ್ಯಂತ ಮೊಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಬೀಳುತ್ತಿರುವ ತುಂತುರು ಹನಿ, ಇಡೀ ರಾತ್ರಿ ಬಿದ್ದ ಜಿಡಿ ಮಳೆಗೆ ಕೂಯ್ಲು ಮಾಡಿದ್ದ ರಾಗಿ ಕೊಳೆಯುವ ಹಂತಕ್ಕೆ ಬಂದಿದ್ದು ರಾಗಿ ಬೆಳೆಗಾರರಲ್ಲಿ ಆತಂಕ ಮಡುಗಟ್ಟಿದೆ. ಹೊಲದಲ್ಲಿಯೇ ಮೊಳಕೆಯೊಡೆಯುತ್ತಿರುವ ರಾಗಿ ಹುಲ್ಲಿಗಾಗಿ ಹಪಹಪಿಸುತ್ತಿರುವ ರೈತರು ಕೈಗೆ ಬಂದ ಬೆಳೆ ಬಾಯಿಗೆ ಬರಲಿಲ್ಲವೆಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಾಗಿ ಬೆಳೆಗಾರರಿಗೆ ಭತ್ತ ಬೆಳೆದ ರೈತರಿಗೆ ಸೈನಿಕ‌ ಹುಳುವಿನ ಬಾಧೆ ಕಾಡುತ್ತಿದ್ದು, ಚಂಡಮಾರುತದ‌ ಕೋಟಲೆ, ಜಿಡಿ ಮಳೆಯಿಂದ ಗ್ರಾಮೀಣ ರಸ್ತೆಗಳು ಕೆಸರು ಗದ್ದೆಗಳಂತಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ