‘ಸ್ವಯಂ ಸೇವಕರ ಕಾರ್ಯ ಶ್ಲಾಘನೀಯ’

kiran Bedi in hubli

01-12-2017

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನಸೇವಾ ಕಾರ್ಯ ಶ್ಲಾಘನೀಯ, ಎಂದು ಹುಬ್ಬಳ್ಳಿಯಲ್ಲಿ ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಡಾ.ಕಿರಣ ಬೇಡಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಸೇವಾ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಸಾಮಾನ್ಯ ಜನರಿಗೆ ತಲುಪುತ್ತಿಲ್ಲ, ಕೇಂದ್ರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬ ನಾಗರಿಕರಿಗೂ ಸರ್ಕಾರಿ ಯೋಜನೆಗಳ ಸಮಗ್ರ ಮಾಹಿತಿ ಇರಬೇಕು ಎಂದರು.

ಅಲ್ಲದೇ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು, ಉತ್ತರ ಭಾರತೀಯರು ಕನಿಷ್ಠಪಕ್ಷ ಒಂದು ದಕ್ಷಿಣ ಭಾರತೀಯ ಭಾಷೆ ಕಲಿಯುವಂತಾಗವೇಕು. ಪ್ರಧಾನಿಗಳ ‘ಮನ್ ಕಿ ಬಾತ್’ ಎಲ್ಲರೂ ತಮ್ಮ ಮಾತೃಭಾಷೆಗಳಲ್ಲಿ ಕೇಳುವಂತಾಗಬೇಕು. ಬಹುಭಾಷಾ ಸಂಸ್ಕೃತಿಯ ದೇಶದಲ್ಲಿ ಭಾಷಾಂತರ ಮಾಡಲು ಸಮರ್ಥವಾದ ಸಾಫ್ಟ್ ವೇರ್ ಅವಶ್ಯಕತೆಯಿದೆ ಎಂದು ಇದೇ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ