‘ನಮ್ಮದು ಕ್ಯಾಶ್ ಲೆಸ್ ಪಾರ್ಟಿ’01-12-2017

ಮೈಸೂರು: ಮೊದಲ ಹೆಜ್ಜೆ ನಾವು ಸರಿಯಾಗಿ ಇಡಬೇಕು, ಮೊದಲ ಹೆಜ್ಜೆಯೇ ತಪ್ಪಾಗಿ ಇಟ್ಟರೆ ಕಷ್ಟವಾಗುತ್ತೆ ಎಂದು ನಟ ಉಪೇಂದ್ರ ಹೇಳಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು  ಕ್ಷೇತ್ರವಾರು ಬಜೆಟ್ ಮಾಡಬೇಕು ಎಂದಿದ್ದೇವೆ, ಮೊದಲು ಕೇವಲ 10% ಮಾತ್ರ ನಮ್ಮ‌ಬಗ್ಗೆ ಪ್ರಚಾರ ಆಗಿತ್ತು. ಇದೀಗಾ ನಮ್ಮ ಸದಸ್ಯರು ಪ್ರತಿ ಹಳ್ಳಿಗೆ ಹೋಗಿ ಪಕ್ಷದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ, ಇದರಿಂದ ನಮ್ಮ‌ಪಕ್ಷ ಜನರ ಬಳಿ ತಲುಪುತ್ತಿದೆ, ಪ್ರಜಾಕೀಯ ಆ್ಯಪ್ ಮೂಲಕ ಜನರಿಗೆ ನಾವು ಸಿಗುತ್ತೇವೆ ಎಂದು ತಿಳಿಸಿದರು.

ರಾಜಕಾರಣ ಅಂದರೆ ಹಿಂಗೇ ಇದೆ ಅಂತ ನಂಬಿ ಬಿಟ್ಟಿದ್ದೇವೆ, ಅದರ ಬದಲಾವಣೆ ಹೇಗೆ ಅನ್ನೋದೆ ದೊಡ್ಡ ಕುತೂಹಲವಾಗಿದೆ, ಅದಕ್ಕಾಗಿ 'ಕೆಪಿಜೆಪಿ ಪಕ್ಷ' ಕ್ಯಾಶ್‌ಲೇಶ್ ಪಾರ್ಟಿ ಹುಟ್ಟುಹಾಕಿದ್ದೇವೆ, ಈ ಮೂಲಕ ಸಮಾಜದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ ಎಂದರು.

ಈಗ ಮಾಧ್ಯಮಗಳ ಮೂಲಕ ಹಳ್ಳಿ ಹಳ್ಳಿಗೂ ನಮ್ಮ ಪಕ್ಷ ತಲುಪಿದೆ, ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ, ಅದಕ್ಕಾಗಿಯೇ ನಾವು ಆ್ಯಪ್ ಬಿಡುಗಡೆ ಮಾಡಿದ್ದೇವೆ ವೆಬ್‌ಸೈಟ್ ಮೂಲಕ ನಮ್ಮನ್ನ ಸಂಪರ್ಕಿಸಬಹುದು, ಅರ್ಹ ಅಭ್ಯರ್ಥಿಗಳು ನಮ್ಮ ಪಕ್ಷ ಸೇರಬಹುದು, ಆದರೆ ನಾನೂ ನಾಯಕ ಆಗುತ್ತೇನೆ ಅಂತ ನಮ್ಮ ಪಕ್ಷಕ್ಕೆ ಬರಬೇಡಿ ಎಂದು  ಉಪ್ಪಿ ಖಡಕಕ್ಕಾಗಿ ನುಡಿದಿದ್ದಾರೆ. ಬೆಳಗ್ಗೆ 9 ರಿಂದ ಸಂಜೆ 6ರವೆಗೆ ಕೆಲಸ ಮಾಡುವವರು ಮಾತ್ರ ಬನ್ನಿ, ಇಲ್ಲವಾದ್ರೆ ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಬರಬೇಡಿ ಎಂದು ಕಂಡಿಷನ್ ಹಾಕಿದ್ದಾರೆ.

ನಾನೂ ಬುದ್ಧಿವಂತನಲ್ಲ, ದಡ್ಡ, ಹಾಗಾಗಿ ಇಲ್ಲಿ ಬಂದು ಕುಳಿತಿದ್ದೇನೆ, ದಡ್ಡತನದಲ್ಲಿ ಒಂದು ರೀತಿಯ ಮಜಾ ಇದೆ. ನಾನೂ ಮತ ಭಿಕ್ಷೆ ಹಾಕಿ ಎಂದು ಬೇಡುತ್ತಿಲ್ಲ, ನಾನೂ ದೇಶ ಸೇವೆ ಮಾಡಲು ಬಂದಿದ್ದೇನೆ ಎಂದರು.


ಸಂಬಂಧಿತ ಟ್ಯಾಗ್ಗಳು

upendra kpjp ಕಂಡಿಷನ್ ವೆಬ್‌ಸೈಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ