'ಹೊಂದಾಣಿಕೆ ರಾಜಕಾರಣ ಇಲ್ಲ'01-12-2017

ರಾಮನಗರ: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ  ಜಿಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ರಾಮನಗರದಲ್ಲಿ ಮಾತನಾಡಿದ್ದು, ಎಲ್ಲವನ್ನೂ ನೀಟ್ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ, 224 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಕುಮಾರಸ್ವಾಮಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಒಂದು ಹಂತದ ಪಟ್ಟಿಯನ್ನು ಕುಮಾರಸ್ವಾಮಿ ಈಗಾಗಲೇ ತಯಾರು ಮಾಡುತ್ತಿದ್ದಾರೆ, ಚುನಾವಣೆಗೆ ಇನ್ನು ಸಮಯವಿದೆ ಹೀಗಾಗಿ, ಮೊದಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ರೆ ಗೊಂದಲಗಳು ಆಗಲಿವೆ. ಎಲ್ಲವನ್ನು ಸಿದ್ಧ ಪಡಿಸಿದ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದರು.

ಇನ್ನು 10 ನೇ ತಾರೀಖು ತುಮಕೂರಿನಲ್ಲಿ ದೊಡ್ಡ ಮಟ್ಟದ ಮುಸ್ಲಿಂ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ತಿಳಿಸಿದ ಅವರು, ಹೊಂದಾಣಿಕೆ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ, ಕರ್ನಾಟಕದಲ್ಲಿ ನನ್ನ ರಾಜಕಾರಣ 57 ವರ್ಷ ಆಯ್ತು, ನಾನು ಇನ್ನೂ ಬದುಕಿದ್ದೇನೆ, ಮೋದಿಯವರ ಸ್ಥಿತಿ ಏನಾಗ್ತಿದೆ ನೋಡ್ತಿದ್ದೀರಾ, ದೇವೆಗೌಡರ ರಾಜಕೀಯ ನಿಲ್ಲಿಸಲು ಆಗುವುದಿಲ್ಲ ಅಲ್ಲದೇ ಜೆಡಿಎಸ್ ಬೆಳವಣಿಗೆಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ನೀರಾವರಿ ವಿಚಾರದ ಕುರಿತು, ಆಧುನಿಕ ಭಗೀರಥ ನೀರನ್ನು ಎಲ್ಲಿಂದ ತಂದಿದ್ದಾರೆ, ಅಂತ ಹೇಳ್ತಾರ? ಹೇಳಲು ಸಾಧ್ಯವಿಲ್ಲ, ಚನ್ನಪಟ್ಟಣಕ್ಕೆ ನೀರು ಯಾರು ತಂದ್ರು ಅದರ ಹಿಂದೆ ಯಾರಿದ್ದಾರೆಂದು ಹೇಳಲಿ, ಹೇಳಲು ಅವರಿಂದ ಸಾಧ್ಯವಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

HD devegowda JDS ಚನ್ನಪಟ್ಟಣ ಜೆಡಿಎಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ