ಪೊಲೀಸರ ವಿರುದ್ಧ ಚಿತ್ರನಟ ದೂರು...!

film Actor complained against the police

01-12-2017

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ಕ್ಯಾಬ್ ನಿಲ್ಲಿಸಿದ ಹಿನ್ನೆಲೆಯಲ್ಲಿ ವೈಟ್‍ಫೀಲ್ಡ್ ಸಂಚಾರ ಪೊಲೀಸರು ನನ್ನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಚಿತ್ರನಟ ಪಿ.ಸಂತೋಷ್ ಮೇಲೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ವೈಟ್‍ಫೀಲ್ಡ್ ಸಂಚಾರ ಪೊಲೀಸರ ನಡವಳಿಕೆಯಿಂದ ಬೇಸತ್ತ ಸಂತೋಷ್  ಅನುಚಿತ ನಡವಳಿಕೆ, ಅಧಿಕಾರ ದುರ್ಬಳಕೆ ಮಾಡಿಕೊಂಡ ಪೊಲೀಸರ ವಿರುದ್ಧ ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ಅವರಿಗೆ ದೂರು ಸಲ್ಲಿಸಿ, ದೌರ್ಜನ್ಯ ಎಸಗಿದ ಪೇದೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೂರ್ವ ವಲಯ ಸಂಚಾರ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಸೂಚನೆ ನೀಡಲಾಗಿದೆ.

ಆದರೆ ಸಂತೋಷ್ ಆರೋಪವನ್ನು ನಿರಾಕರಿಸಿರುವ ವೈಟ್‍ಪೀಲ್ಡ್ ಸಂಚಾರ ಪೊಲೀಸರು ಸಂತೋಷ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಲು ಮುಂದಾದ ಸಂತೋಷ್ ವಿರುದ್ದ ಕಾಡುಗೋಡಿ ಪೊಲೀಸರಿಗೆ ದೂರು ನೀಡಿಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಕಾಡುಗೋಡಿ ಪೊಲೀಸರು ಕ್ಯಾಬ್ ವಶಕ್ಕೆ ತೆಗೆದುಕೊಂಡು ಸಂತೋಷ್ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ, ಇದಾದ ಒಂದು ತಿಂಗಳ ನಂತರ ಸಂತೋಷ್ ದೂರು ನೀಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ.

ಮಾದ ಮತ್ತು ಮಾನಸಿ,ಮುಗಿಲು ಚಿತ್ರಗಳಲ್ಲಿ ನಟಿಸಿರುವ ಪಿ ಸಂತೋಷ್ ಜೀವನೋಪಾಯಕ್ಕಾಗಿ ಕ್ಯಾಬ್ ಚಲಾಯಿಸುತ್ತಿದ್ದು, ಕಳೆದ ನ.3 ರಂದು ಸಂಜೆ 5.30ರ ವೇಳೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಐಟಿಪಿಎಲ್‍ನ ಜಿ.ಆರ್.ಟೆಕ್ ಪಾರ್ಕ್ ಮುಂದೆ ಕ್ಯಾಬ್ ನಿಲ್ಲಿಸಿದ್ದರು. ಸಂಚಾರ ನಿಯಮ ಉಲ್ಲಂಘಿಸಿ ಕ್ಯಾಬ್ ನಿಲ್ಲಿಸಿದ್ದರಿಂದ ಸ್ಥಳಕ್ಕೆ ಬಂದ ವೈಟ್‍ಫೀಲ್ಡ್ ಸಂಚಾರ ಪೊಲೀಸ್ ಪೇದೆಗಳಾದ ಸಂತೋಷ್ ನಾಯ್ಕ, ಕಿರಣ್ ಸಂಚಾರ ನಿಯಮ ಉಲ್ಲಂಘನೆಯನ್ನು ಪ್ರಶ್ನಿಸಿದಾಗ ಜಗಳ ಉಂಟಾಗಿತ್ತು. ಈ ವೇಳೆ ಆಕ್ರೋಶಗೊಂಡ ಸಂತೋಷ್ ಪೇದೆಗಳ ಮೇಲೆ ಹಲ್ಲೆಗೆ ಮುಂದಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

ಕೂಡಲೇ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಂಡು ಕ್ಯಾಬ್‍ನೊಂದಿಗೆ ಸಂತೋಷ್‍ನನ್ನು ಠಾಣೆಗೆ ಕರೆದೊಯ್ದು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಠಾಣೆಗೆ ಕರೆದೊಯ್ದ ನನ್ನ ಮೇಲೆ ಸಂಚಾರ ಪೊಲೀಸರು ಹಲ್ಲೆ ನಡೆಸಿದ್ದು ಹಲ್ಲೆಯಿಂದ ಸುಸ್ತಾಗಿದ್ದ ನನ್ನನ್ನು ಕಾಡುಗೋಡಿ ಪೊಲೀಸರು ನೆರವು ನೀಡಿ ಊಟ, ಬಸ್ ಚಾರ್ಜ್ ಕೊಟ್ಟು ಮನೆಗೆ ಕಳುಹಿಸಿಕೊಟ್ಟಿದ್ದರು ಎಂದು ಸಂತೋಷ್ ತಿಳಿಸಿದ್ದಾರೆ. ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಲು ಹೋದ ನನ್ನ ತಾಯಿ ಮೇಲೂ ವೈಟ್‍ಫೀಲ್ಡ್ ಸಂಚಾರ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಮಗನ ಪರ ಮಾತನಾಡಲು ಬಂದರೆ ನಿನ್ನ ಮೇಲೂ ಪ್ರಕರಣ ದಾಖಲಿಸಲಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದಾರೆ.

ಸಂಚಾರ ಪೊಲೀಸರ ನಡವಳಿಕೆಯಿಂದ ಬೇಸತ್ತ ಸಂತೋಷ್  ಅನುಚಿತ ನಡವಳಿಕೆ, ಅಧಿಕಾರ ದುರ್ಬಳಕೆ ಮಾಡಿಕೊಂಡ ಪೊಲೀಸರ ವಿರುದ್ಧ ನಗರ  ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ದೂರು ಸಲ್ಲಿಸಿದ್ದು, ದೌರ್ಜನ್ಯ ಎಸಗಿದ ಪೇದೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೂರ್ವ ವಲಯ ಸಂಚಾರ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಸೂಚನೆ ನೀಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

traffic police whitefield ದೌರ್ಜನ್ಯ ಸಂಚಾರ ಡಿಸಿಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ