‘ಅಚ್ಚೇ ದಿನ್ ಬಂತಾ ಎಂದು ಕೇಳಬಾರದಾ’

yeddyurappa vs siddaramaiah

01-12-2017

ಬಾಗಲಕೋಟೆ: ಯಡಿಯೂರಪ್ಪ ಮಹಾಸುಳ್ಳುಗಾರ, ರಾಜ್ಯ ಸರ್ಕಾರದ ಭ್ರಷ್ಟಾಚಾರ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ ಹೊರತು ಬಿಡುಗಡೆ ಮಾಡಿಲ್ಲ, ಯಡಿಯೂರಪ್ಪ ಬಳಿ ಯಾವ ದಾಖಲೆಗಳಿಲ್ಲ, ‌ಕೇವಲ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು, ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ ಅವರು, ವಿಧಾನ ಸಭೆಯಲ್ಲಿ  ಭ್ರಷ್ಟಾಚಾರ ದಾಖಲೆಗಳನ್ನು ಯಾಕೆ ದಾಖಲೆ ಬಿಡುಗಡೆ ಮಾಡಲಿಲ್ಲ, ಇದರಿಂದ ಇದು ಸುಳ್ಳು ಅನಿಸ್ತಿಲ್ವಾ? ಎಂದು ಕೇಳಿದ್ದಾರೆ.

ಬಿಎಸ್ ವೈಗೆ  ಸಂಸ್ಕೃತಿ, ರಾಜಕೀಯ ಸಂಸ್ಕೃತಿ ಇಲ್ಲ. ರಾಜಕೀಯ ಜ್ಞಾನನೂ ಇಲ್ಲ, ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ, ಇದೇ ಅವರ ಸಂಸ್ಕೃತಿ ಎಂದರು. ಯಾವ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುತ್ತಿಲ್ಲ, ಯಡಿಯೂರಪ್ಪ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯವರೇ ನನ್ನ ಸಂಪರ್ಕದಲ್ಲಿದ್ದಾರೆ. ಸಮಯ ಬಂದಾಗ ಯಾರೂ ಅಂತ ಹೇಳುತ್ತೇನೆ ಎಂದಿದ್ದು, ಯಾರೇ ಆಗಲಿ, ರಾಜಕೀಯವಾಗಿ ಮಾತಾಡಬೇಕು, ವ್ಯಯಕ್ತಿಕವಾಗಿ  ಮಾತನಾಡಬಾರದು ಎಂದರು. ಇನ್ನು ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಅವರ ಹಾಗೆ ಅಸಂಸದೀಯ ಪದಗಳನ್ನು ಬಳಸಿದ್ದೀನಾ, ಅಂದರೆ ಈ ದೇಶದಲ್ಲಿ ಪ್ರಧಾನಿಯನ್ನು ಟೀಕೆ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ.

ಅಚ್ಚೇ ದಿನ್ ಆಯೇಗಾ ಅಂದ್ರು  ಬಂತಾ? ಪ್ರತಿವರ್ಷ 2 ಲಕ್ಷ ಉದ್ಯೋಗ ಸೃಷ್ಡಿ ಮಾಡ್ತಿನಿ ಅಂದರು, ಅದನ್ನು ಕೇಳಬಾರದಾ..? ನಾವು ಸಾಲ‌ಮನ್ನಾ ಮಾಡಿದ್ವಿ, ಅವರು ಮಾಡಲಿ ಅಂತ ಕೇಳಬಾರದಾ..?  ಎಂದ ಸಿಎಂ, ನಾನು ಯಾರಿಗೂ ಏಕವಚನದಲ್ಲಿ ಮಾತನಾಡಿಲ್ಲ, ನಾನು ಯಡಿಯೂರಪ್ಪ ಅವರನ್ನು ಯಡಿಯೂರಪ್ಪನವರೆ ಅಂತೀನಿ ಎಂದು, ಎಡಬಿಡಂಗಿ, ಚಪರಾಸಿ ಸಾಹಿತಿಗಳು ಎಂದ ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ತಿರುಗೇಟು ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ