ಈ ಆ್ಯಪ್ ಇದೆಯೇ ಫೋನಲ್ಲಿ? ಹುಷಾರು..

Dangerous apps listed by the government

01-12-2017

ನಿಮ್ಮ ಸ್ಮಾರ್ಟ್ ಫೋನ್‌ ನಲ್ಲಿ ಈ ಕೆಳಗಿನ ಆ್ಯಪ್ ಗಳೇನಾದ್ರೂ ಇವೆಯೇ? ಹಾಗಿದ್ರೆ ಸರಿಯಾಗಿ ನೋಡ್ಕೊಳ್ಳಿ, ನಿಮ್ಮ ಫೋನ್ ನಲ್ಲಿರೋ ಕೆಲವು ಆ್ಯಪ್ ಗಳು ದೇಶದ ಭದ್ರತೆಗೆ ಧಕ್ಕೆ ತರೋ ಸಾಧ್ಯತೆ ಇದೆ. ಹೌದು, ಕೇಂದ್ರ ಸರ್ಕಾರವರು 42 ಆ್ಯಪ್ ಗಳನ್ನು ಅಪಾಯಕಾರಿ ಎಂದು ವರ್ಗೀಕರಿಸಿದ್ದಾರೆ.

ಇಂಥ ಆ್ಯಪ್ ಗಳನ್ನು ಬಳಸಿಕೊಂಡು ಭಾರತದ ಮೇಲೆ ಸೈಬರ್ ದಾಳಿ ಅಂದರೆ, ಇಂಟರ್‌ ನೆಟ್ ಸಂಪರ್ಕವಿರುವ ಕೋಟ್ಯಂತರ ಕಂಪ್ಯೂಟರ್ ನೆಟ್‌ವರ್ಕ್ ಗಳ ಮೇಲೆ ದಾಳಿ ಮಾಡೋದು. ದೇಶದ ರಕ್ಷಣಾ ವ್ಯವಸ್ಥೆಯೂ ಸೇರಿದಂತೆ, ದೇಶಕ್ಕೆ ಸಂಬಂಧಿಸಿದ ಸೂಕ್ಷ್ಮಮಾಹಿತಿ ಕದಿಯುವುದು ಮತ್ತು ಕಂಪ್ಯೂಟರ್ ಜಾಲವನ್ನು ಬಳಸಿಕೊಂಡು ದೇಶದ ವಿದ್ಯುತ್ ಜಾಲ, ವಿಮಾನ ಸೇವೆ, ರೈಲು ಸೇವೆಗಳಲ್ಲಿ ಎಡವಟ್ಟಾಗುವಂತೆ ಮಾಡುವುದು, ಸರ್ಕಾರದ ವಿವಿಧ ಇಲಾಖೆಗಳ ಕಾರ್ಯನಿರ್ವಹಣಾ ವ್ಯವಸ್ಥೆ ಹಾಳು ಮಾಡುವುದು ಇತ್ಯಾದಿ ಎಲ್ಲವೂ ಸೈಬರ್ ದಾಳಿ ಅನ್ನುವುದಕ್ಕೆ ಉದಾಹರಣೆ.

ಕೇಂದ್ರ ಸರ್ಕಾರದವರು ಪ್ರಕಟಿಸಿರುವ ಅಪಾಯಕಾರಿ ಆ್ಯಪ್ ಗಳ ಪಟ್ಟಿ ಹೀಗಿದೆ: ವಿ ಚಾಟ್, ಶೇರ್ ಇಟ್, ಟ್ರೂ ಕಾಲರ್, ಯು ಸಿ ನ್ಯೂಸ್, ಯು ಸಿ ಬ್ರೌಸರ್,  ವೈಬೊ,  ಬ್ಯೂಟಿ ಪ್ಲಸ್, ನ್ಯೂಸ್ ಡಾಗ್, ವಿವಾ ವಿಡಿಯೊ, ಕ್ಯುಯು ವಿಡಿಯೊ. ಪ್ಯಾರಲಲ್ ಸ್ಪೇಸ್, ಏಪಸ್ ಬ್ರೌಸರ್, ಪರ್ಫೆಕ್ಟ್ ಕಾರ್ಪ್, ವೈರಸ್ ಕ್ಲೀನರ್(ಹೈ ಸೆಕ್ಯುರಿಟಿ ಲ್ಯಾಬ್), ಸಿಎಂ ಬ್ರೌಸರ್, ಮಿ ಕಮ್ಯುನಿಟಿ, ಡಿಯು ರೆಕಾರ್ಡರ್, ವಾಲ್ಟ್ ಹೈಡ್, ಯೂ ಕ್ಯಾಮ್ ಮೇಕಪ್, ಮಿ ಸ್ಟೋರ್, ಕ್ಯಾಚ್ ಕ್ಲಿಯರ್, ಡಿಯು ಆಪ್ಸ್ ಸ್ಟುಡಿಯೊ, ಡಿಯು ಬ್ಯಾಟರಿ ಸೇವರ್, ಡಿಯು ಕ್ಲೀನರ್, ಡಿಯು ಪ್ರೈವೆಸಿ, 360 ಸೆಕ್ಯುರಿಟಿ, ಡಿಯು ಬ್ರೌಸರ್, ಕ್ಲೀನ್ ಮಾಸ್ಟರ್(ಚೀತಾ ಮೊಬೈಲ್), ಬೈಡು ಟ್ರಾನ್ಸ್‌ಲೇಟ್, ಬೈಡು ಮ್ಯಾಪ್, ವಂಡರ್ ಕ್ಯಾಮರ, ಇಎಸ್ ಫೈಲ್ ಎಕ್ಸ್‌ಪ್ಲೋರರ್, ಫೊಟೊ ವಂಡರ್, ಕ್ಯುಕ್ಯು ಇಂಟರ್ ನ್ಯಾಷನಲ್, ಕ್ಯುಕ್ಯು ಮ್ಯೂಸಿಕ್, ಕ್ಯುಕ್ಯು ಮೇಲ್, ಕ್ಯುಕ್ಯು ಪ್ಲೇಯರ್, ಕ್ಯುಕ್ಯು ನ್ಯೂಸ್ ಫೀಡ್, ಕ್ಯುಕ್ಯು ಸೆಕ್ಯುರಿಟಿ ಸೆಂಟರ್, ವಿ ಸಿಂಕ್, ಸೆಲ್ಫಿ ಸಿಟಿ, ಮೇಲ್ ಮಾಸ್ಟರ್, ಮಿ ವಿಡಿಯೊ ಕಾಲ್ ಶಿಯೋಮಿ, ಕ್ಯುಕ್ಯು ಲಾಂಚರ್.

ಇವುಗಳಲ್ಲಿ ಬಹುತೇಕ ಆ್ಯಪ್ ಗಳು ಚೀನಾದಲ್ಲಿ ಸಿದ್ಧಪಡಿಸಿದ್ದವಾಗಿದ್ದು, ಈ ಮೇಲಿನ ಎಲ್ಲ ಆ್ಯಪ್ ಗಳನ್ನು ಸ್ಪೈ ವೇರ್ ಅಥವ ಮಾಲ್ವೇರ್ ಎಂದು ಹೇಳಲಾಗಿದೆ. ಈ ಆ್ಯಪ್ ಗಳು ದೇಶದ ಭದ್ರತೆಗೆ ಧಕ್ಕೆ ತರುವ ಸಾಧ್ಯತೆ ಇದ್ದು, ಕಡ್ಡಾಯವಾಗಿ ಇವನ್ನು ಬಳಸದಿರುವಂತೆ ಭಾರತದ ಸೇನೆ ಮತ್ತು ಅರೆ ಸೇನಾ ಪಡೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಆದರೆ, ಟ್ರೂ ಕಾಲರ್ ಆ್ಯಪ್ ನವರು ಭಾರತ ಸರ್ಕಾರದ ಈ ಸೂಚನೆಗೆ ಪ್ರತಿಕ್ರಿಯೆ ನೀಡಿದ್ದು, ನಮ್ಮದು ಸ್ವೀಡನ್ ಮೂಲದ ಕಂಪನಿ, ನಮ್ಮ ಆ್ಯಪ್ ಮಾಲ್ವೇರ್ ಅಲ್ಲ. ಬಳಕೆದಾರರು ಅನುಮತಿಸುವ ಮಾಹಿತಿಯಷ್ಟನ್ನೇ ನಾವು ಪಡೆಯುತ್ತೇವೆ ಎಂದು ಹೇಳಿದ್ದಾರೆ.  

ಈ ಆ್ಯಪ್ ಗಳನ್ನು ಬಳಸಬೇಡಿ ಎಂದು ಕೇಂದ್ರ ಸರ್ಕಾರದವರು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆಯೇ ಹೊರತು ನಾಗರಿಕರಿಗಲ್ಲ. ಆದರೆ, ಅವರಿಗೆ ಒಳ್ಳೆಯದಲ್ಲದೇ ಇರೋದು ನಮಗೂ ಅಷ್ಟೇನೂ ಒಳ್ಳೆಯದಲ್ಲವೇನೋ?


ಸಂಬಂಧಿತ ಟ್ಯಾಗ್ಗಳು

apps Malware ಆ್ಯಪ್ ವಿಡಿಯೊ ಕಾಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ