ಮಹಿಳಾ ಸೆಕ್ಯೂರಿಟಿ ಆತ್ಮಹತ್ಯೆಗೆ ಯತ್ನ

Women Security attempt to Suicide

01-12-2017 232

ಬೀದರ್: ಬೀದರ್ ನ ಜಿಲ್ಲಾಸ್ಪತ್ರೆ ಅಧಿಕಾರಿಗಳ ಕಿರುಕುಳದಿಂದ ಮಹಿಳಾ ಸೆಕ್ಯೂರಿಟಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಸುಮಾರು 15-20 ಮಾತ್ರೆಗಳು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೀದರ್ ಜಿಲ್ಲಾಸ್ಪತ್ರೆಯ ಸೆಕ್ಯೂರಿಟಿ ಸಂಗೀತಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಸಂಗೀತ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಸಂಗೀತ ಅವರಿಗೆ ಆರ್.ಎಂ.ಒ(ರೀಜನಲ್ ಮೆಡಿಕಲ್ ಆಫಿಸರ್) ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರಂತೆ, ವಿನಾಕಾರಣ ತಮ್ಮನ್ನು ಬೈಯುವುದು ಇನ್ನಿತರ ಕಿರುಕುಳಗಳನ್ನು ನೀಡುತ್ತಿದ್ದು, ಇದರಿಂದ ಬೇಸತ್ತ ಸಂಗೀತ ಆರ್.ಎಂ.ಒ ಸಮ್ಮುಖದಲ್ಲೇ ಆತ್ಮಹತ್ಯೆಗೆ ಯತ್ನಸಿದ್ದಾರೆ.

ಕಳೆದ ಎರಡು ಹಿಂದಷ್ಟೇ ಆಸ್ಪತ್ರೆಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು, ಭೇಟಿ ನೀಡಿದ್ದರು. ಈ ವೇಳೆ, ಆರೋಗ್ಯ ಸಚಿವರಿಗೂ ತನ್ನ ಅಳಲನ್ನು ತೋಡಿಕೊಂಡಿದ್ದರು ಸಂಗೀತ. ಆರೋಗ್ಯ ಸಚಿವರಿಗೆ ಸಮಸ್ಯೆ ಹೇಳಿಕೊಂಡಿದ್ದಕ್ಕೆ ಮತ್ತೆ ಕಿರುಕುಳ ಆರಂಭವಾಗಿದ್ದು, ಕಳೆದ 3 ದಿನಗಳಿಂದ ಕಾರ್ಯ ನಿರ್ವಹಿಸಿದರು ಹಾಜರಿ ಹಾಕಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೂಡ ಸಂಗೀತಾ ಅವರನ್ನು 3 ತಿಂಗಳು ಕೆಲಸದಿಂದ ತೆಗೆದುಹಾಕಿದ್ರಂತೆ, ಮತ್ತೆ 2 ದಿನಗಳಿಂದ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ