ಬಳ್ಳಾರಿ ಬಿಜೆಪಿಯಲ್ಲೂ ಭಿನ್ನಮತ ಸ್ಟೋಟ

Dissent in Bellary BJP

01-12-2017 358

ಬಳ್ಳಾರಿ: ಬಳ್ಳಾರಿ ಬಿಜೆಪಿಯಲ್ಲಿ ಭಿನ್ನಮತ ಹಿನ್ನೆಲೆ, ಹಗರಿಬೊಮ್ಮನ ಹಳ್ಳಿಯ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ, ಹಣ ಪಡೆದು ಟಿಕೆಟ್ ಹಂಚಿದ್ದಾರೆ ಎಂದು, ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ವೆಂಕಟೇಶ್ ನಾಯ್ಕ್ ಅವರು ಆರೋಪಿಸಿದ್ದಾರೆ. ಈ ಕುರಿತು, ನನ್ನ ಬಳಿ ದಾಖಲೆಗಳಿವೆ ಎಂದು, ವೆಂಕಟೇಶ ನಾಯ್ಕ್ ಹೇಳಿಕೆ ನೀಡಿದ್ದಾರೆ.

ನೇಮಿರಾಜ್ ನಾಯ್ಕ್ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಪಕ್ಷದ ಮಾಜಿ ಶಾಸಕರಾಗಿದ್ದು, ಬಿಜೆಪಿ ಪರಿವರ್ತನಾ ಯಾತ್ರೆಯಲ್ಲೂ ಸಹ ರಾಜಕೀಯ ಮಾಡಿದ್ದಾರೆ, ಬಿಜೆಪಿ ಕೂಡ್ಲಿಗಿ ಅಧ್ಯಕ್ಷನಾದ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನೇಮಿರಾಜ್, ಚೇಲಾಗಳನ್ನು ಇಟ್ಟುಕೊಂಡು ಚಿಲ್ಲರೆ ರಾಜಕೀಯ ಮಾಡುತ್ತಾರೆ, ನಾನು ಕೂಡ ಹಗರಿಬೊಮ್ಮನಹಳ್ಳಿ  ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ