‘ಎಷ್ಟೇ ಸಮಸ್ಯೆ ಆದ್ರು ಲೋಡ್ ಶೆಡ್ಡಿಂಗ್ ಇಲ್ಲ’

No load shedding in state

01-12-2017

ಬೆಂಗಳೂರು: ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ, 37ನೇ ಪುಣ್ಯ ಸ್ಮರಣೆ ದಿನಾಚರಣೆಯಾದ ಇಂದು, ಇಂಧನ ಸಚಿವ ಡಿಕೆ ಶಿವಕುಮಾರ್ ಅವರು, ಸರ್ಕಾರದ ವತಿಯಿಂದ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಹಾಗು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕೆಂಗಲ್ ಹನುಮಂತಯ್ಯ ಅವರು ಧೀಮಂತ ವ್ಯಕ್ತಿ, ಅವರ ಪರಿಶ್ರಮದಿಂದ ಇಂದು ವಿಧಾನಸೌಧ ಶಕ್ತಿ ಕೇಂದ್ರವಾಗಿ ಬೆಳೆದಿದೆ. ರಾಜ್ಯಕ್ಕೆ ಅವರ ಕೊಡುಗೆ ಅಪಾರ, ಅವರ ತೀರ್ಮಾನಗಳು ಕರ್ನಾಟಕಕ್ಕೆ ಹೊಸ ತಿರುವು ನೀಡಿತು ಎಂದರು. ಕೆಂಗಲ್ ರ ನೆನಪಿಗಾಗಿ ರಾಮನಗರದ ವಿಧಾನಸೌಧದ ಮುಂದೆ ಕೆಂಗಲ್ ಹಾಗೂ ಅಂಬೇಡ್ಕರ್ ಅವರ ಪ್ರತಿಮೆಗಳು ಅನಾವರಣ ಮಾಡುತ್ತೇವೆ ಎಂದು ಹೇಳಿದರು. 

ಇನ್ನು, ರಾಜ್ಯದಲ್ಲಿ ಸೇರಿದಂತೆ ದೇಶ್ಯಾದ್ಯಂತ ಕಲ್ಲಿದ್ದಲು ಕೊರತೆಯಾಗಿದೆ, ರಾಜ್ಯದಲ್ಲೂ ಕಲ್ಲಿದ್ದಲಿನ ಕೊರತೆ ಸಮಸ್ಯೆ ಹೆಚ್ಚು ಇದೆ, ಇದೇ ತಿಂಗಳ ಡಿಸೆಂಬರ್ 6,7 ರಂದು ದೆಹಲಿಯಲ್ಲಿ ನಡೆಯಲಿರುವ ಇಂಧನ ಸಚಿವರ ಸಮ್ಮೇಳನದಲ್ಲಿ ಇದರ ಬಗ್ಗೆ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.

ಇಂಧನ ಸಚಿವರು, ಕಲ್ಲಿದ್ದಲುಸಚಿವನ್ನು ಭೇಟಿಯಾಗಿ ಮನವಿ ಮಾಡ್ತೀನಿ, ಅಂತರಾಷ್ಟ್ರೀಯ ಮೂಲದಿಂದ ಕಲ್ಲಿದ್ದಲು ಖರೀದಿಗೆ ಯತ್ನ ನಡೆದಿದೆ ಎಂದ ಅವರು, ಮಹಾರಾಷ್ಟ್ರದಿಂದ ಕಲ್ಲಿದ್ದಲು ಪಡೆಯುವ ಯತ್ನಕ್ಕೂ ಕೇಂದ್ರ ಕಲ್ಲು ಹಾಕಿದೆ, ಕಲ್ಲಿದ್ದಲು ಸರಬರಾಜನ್ನು  ಏಕೆ ಸ್ಥಗಿತ ಗೊಳಿಸಬಾರದು ಎಂದು ಕೇಂದ್ರ ನೊಟೀಸ್ ನೀಡಿದೆ, ಇದು ರಾಜ್ಯದ ವಿರುದ್ಧವಾದ ಸಂದೇಶವನ್ನ ಕೇಂದ್ರ ನೀಡುತ್ತಿದೆ. ಇದು ನಮಗೆ ಶಾಕಿಂಗ್ ನ್ಯೂಸ್, ಕೇಂದ್ರ ಸರ್ಕಾರ ಹೀಗೆ ರಾಜಕೀಯ ಮಾಡಬಾರದು, ಈ ಕುರಿತ ಪ್ರಕರಣಗಳು ಕೋರ್ಟ್ ನಲ್ಲಿದೆ, ದೆಹಲಿಗೆ ಹೋದ ಸಂದರ್ಭದಲ್ಲಿ ಇದನ್ನು ಪ್ರಸ್ತಾಪ ಮಾಡುವುದಾಗಿ ತಿಳಿಸಿದರು. 

ಎಷ್ಟೇ ಸಮಸ್ಯೆ ಆದ್ರು ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ‌ವಹಿಸುತ್ತೇವೆ, ವಿದ್ಯುತ್ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು. ಯಡಿಯೂರಪ್ಪ ಅವರು, ಪ್ರತ್ಯೇಕ ಕಾರಿಡಾರ್ ಕೊಡಿಸಿ ಕೇಂದ್ರ ಗ್ರಿಡ್ ನಿಂದ 2:50 ರೂ ದರದಲ್ಲಿ ವಿದ್ಯುತ್ ಕೊಡಿಸಿದ್ರೆ ಸ್ವಾಗತಿಸುತ್ತೇನೆ. ಈ ಸಂಬಂಧ ಬಿಎಸ್ ವೈ ಅವರಿಗೆ ಪತ್ರ ಬರೆದಿದ್ದೇನೆ. ಬಿಎಸ್ ವೈ ಹೇಳಿದ ಬೆಲೆಗೆ ವಿದ್ಯುತ್ ಕೊಡಿಸಿದರೆ ನಾವು ಖರೀದಿಸಲು ಸಿದ್ಧ ಎಂದರು. ಅದಾನಿ ಕಂಪನಿ ಈಗಾಗಲೇ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ನೀಡುತ್ತಿದ್ದು, ಹೆಚ್ಚುವರಿ ವಿದ್ಯುತ್ ಖರೀದಿಗೆ ಪ್ರಯತ್ನ ಮಾಡುತ್ತಿದ್ದೇವೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ