ಹಾಸ್ಯಾಸ್ಪದ ಅಂಕಿ ಅಂಶಗಳು…

NCRB report....!

01-12-2017

ಮಹಾರಾಷ್ಟ್ರ ದೇಶದ ಅತ್ಯಂತ ‘ಭ್ರಷ್ಟ’ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ರಾಷ್ಚ್ರೀಯ ಅಪರಾಧ ದಾಖಲೆ ಸಂಸ್ಥೆ ಅಂಕಿ ಅಂಶಗಳ ಪ್ರಕಾರ ಮಹಾರಾಷ್ಚ್ರ ಸತತ ಮೂರನೇ ಬಾರಿ ಅತಿ ಹೆಚ್ಚಿನ ಭ್ರಷ್ಟಾಚಾರ ನಡೆಯುವ ರಾಜ್ಯವೆಂದು ಪರಿಗಣಿಸಲ್ಪಟ್ಟಿದೆ. 2016ರಲ್ಲಿ ಮಹಾರಾಷ್ಟ್ರದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ 1016 ಪ್ರಕರಣಗಳು ದಾಖಲಾಗಿವೆ. ಎರಡನೇ ಸ್ಥಾನದಲ್ಲಿರುವ ಒಡಿಶಾದಲ್ಲಿ 569 ಪ್ರಕರಣಗಳು ದಾಖಲಾಗಿವೆಯಂತೆ. ಇನ್ನು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಎಷ್ಟು ಪ್ರಕರಣ ದಾಖಲಾಗಿವೆ, ಆ ರಾಜ್ಯಗಳು ಯಾವ ಸ್ಥಾನದಲ್ಲಿವೆ ಎಂದು ತಿಳಿಯುವುದರ ಅಗತ್ಯವಿಲ್ಲ.

ಏಕೆಂದರೆ, ಈ ಅಂಕಿ ಅಂಶಗಳನ್ನು ನೋಡಿದರೆ ನಗು ಬರುತ್ತದೆ. ಯಾಕಾದರೂ ಇಂಥ ಅಂಕಿ ಅಂಶಗಳನ್ನು ಪ್ರಕಟಿಸುತ್ತಾರೋ ಗೊತ್ತಿಲ್ಲ. ಏಕೆಂದರೆ, 11 ಕೋಟಿ ಜನಸಂಖ್ಯೆ ಇರುವ ಮಹಾರಾಷ್ಟ್ರದಲ್ಲಿ ಅಥವ ಸುಮಾರು 8 ಕೋಟಿಯಷ್ಟು ಜನಸಂಖ್ಯೆ ಇರುವ ಕರ್ನಾಟಕದಲ್ಲಿ, ಗ್ರಾಮಪಂಚಾಯಿತಿ ಮಟ್ಟದಿಂದ ಹಿಡಿದು ತೀರಾ ಮೇಲ್ಮಟ್ಟದವರೆಗೆ ಪ್ರತಿದಿನವೂ ಸಾವಿರಾರು ಜನ, ನ್ಯಾಯಯುತ ರೀತಿಯಲ್ಲೇ ಆಗಬೇಕಾದ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಸಂಬಂಧ ಪಟ್ಟವವರ ಕೈ ಬೆಚ್ಚಗೆ ಮಾಡದಿದ್ದರೆ ಕೆಲಸಗಳು ಆಗುವುದಿಲ್ಲ. ಹೀಗಿರುವಾಗ,  ಅಂಥ ಎಲ್ಲ ಪ್ರಕರಣಗಳೂ ವರದಿಯಾದರೆ, ಪ್ರತಿವರ್ಷದಲ್ಲೂ ಭಾರತ ದೇಶದ ಜನಸಂಖ್ಯೆಯ ಕನಿಷ್ಟ ಮೂರುಪಟ್ಟಿನಷ್ಚಾದರೂ ಪ್ರಕರಣಗಳಾಗುತ್ತವೆ. ಹೀಗಿರುವಾಗ, ಇವು ಯಾವೋ ತಮ್ಮ ಬಳಿ ದಾಖಲಾದ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಆಧರಿಸಿ ಭ್ರಷ್ಟಾಚಾರದ ಪಟ್ಟಿ ತಯಾರಿಸುವುದು ಹಾಸ್ಯಾಸ್ಪದ ವಿಚಾರ. ಒಂದು ವೇಳೆ, ಈ ಎನ್‌ಸಿಆರ್‌ಬಿ ಅಥವ  ನ್ಯಾಷನಲ್ ಕ್ರೈಮ್ ಬ್ಯೂರೊ ದವರು ಹೇಳಿರುವಷ್ಟೇ ಭ್ರಷ್ಟಾಚಾರದ ಪ್ರಕರಣಗಳು ಮಾತ್ರ ನಮ್ಮ ದೇಶದಲ್ಲಿ ನಡೆದಿದ್ದರೆ, ನಿಜವಾಗಿಯೂ ಇದು ಸಂಪೂರ್ಣವಾಗಿ ಸತ್ಯಯುಗ ಎಂದೇ ಘೋಷಿಸಿಬಿಡಬಹುದು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ