ಮೈಸೂರಿಗೆ ಎಲ್.ಕೆ.ಅಡ್ವಾನಿ

L.K. Advani visits mysore

01-12-2017

ಮೈಸೂರು: ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು, ಇಂದು ಮೈಸೂರಿಗೆ ಆಗಮಿಸುತ್ತಿದ್ದು, ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 3.30ಕ್ಕೆ ಮೈಸೂರಿಗೆ ಬರಲಿದ್ದಾರೆ. ಈ ವೇಳೆ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಅಡ್ವಾಣಿ ಅವರು ಭೇಟಿ ನೀಡಲಿದ್ದು, ನಂತರ ನಂಜನಗೂಡು ರಸ್ತೆಯಲ್ಲಿರುವ ಆಶ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ 7ಕ್ಕೆ ವಾಪಸ್ ದೆಹಲಿಗೆ ತೆರಳಲಿದ್ದಾರೆ. ಆದರೆ ಬಿಜೆಪಿ  ಹಿರಿಯ ನಾಯಕನ ಸ್ವಾಗತಕ್ಕೆ ಯಾವುದೇ ವ್ಯವಸ್ಥೆಮಾಡಿಲ್ಲವೆಂದು ಹೇಳಲಾಗುತ್ತಿದೆ. ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯ ಮುತ್ಸದ್ಧಿಯ ರಾಜ್ಯ ಭೇಟಿಗೆ ಬಿಜೆಪಿಯಲ್ಲೇ ಮಹತ್ವ ಇಲ್ಲ ಎಂಬಂತಾಗಿದೆ. ಇನ್ನು ಅಡ್ವಾಣಿಯವರಿಗೆ ಸ್ಥಳೀಯ ಬಿಜೆಪಿ ಪ್ರತಿನಿಧಿಗಳು ಸ್ವಾಗತ ಕೋರಲಿದ್ದಾರೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ