ಈರುಳ್ಳಿ ಬೆಲೆ ಕುಸಿತ ರೈತರ ಆಕ್ರೋಶ

farmers protest in apmc

30-11-2017

ಗದಗ: ಈರುಳ್ಳಿ ಬೆಲೆಯಲ್ಲಿ ದಿಢೀರ ಕುಸಿತದಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆ ನಡೆಸಿದ್ದಾರೆ. ಗದಗ ಎಪಿಎಂಸಿಯಲ್ಲಿ ರಸ್ತೆ ತಡೆದು ಭಾರೀ ಪ್ರತಿಭಟನೆ ನಡೆಸಿದ್ದಾರೆ, ನಿನ್ನೆ 4500 ಇದ್ದ ಬೆಲೆ ಇವತ್ತು ದಿಢೀರ್ 800 ಕ್ಕೆ ಕುಸಿದಿದ್ದು, ದಲ್ಲಾಳಿಗಳ ಷಡ್ಯಂತ್ರದಿಂದ ಬೆಲೆ ಭಾರೀ ಕುಸಿತಗೊಂಡಿದೆ ಎಂದು ಆರೋಪಿಸಿದ್ದಾರೆ. ನಾಸಿಕ್ ನಿಂದ ಈರುಳ್ಳಿ ಆಮದಾಗುತ್ತಿರೋ ಹಿನ್ನೆಲೆ, ದಲ್ಲಾಳಿಗಳ ಕುತಂತ್ರದಿಂದ ಬೆಲೆ ಕುಸಿತ ಕಂಡಿದೆ ಎಂದು ರೈತರು ಆಕ್ರೋಶ ಗೊಂಡಿದ್ದಾರೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ, ಸ್ಥಳಕ್ಕೆ ಬಡಾವಣೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Onion farmers ದಿಢೀರ್ ಷಡ್ಯಂತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ