ಎಮ್ಮೆಗಳನ್ನು ಹುಡುಕಿದ ಫೇಸ್ ಬುಕ್...!

Escaped Buffalos in Facebook ...!

30-11-2017

ಕಳೆದ ಸೋಮವಾರ ಗ್ರಾಮದಿಂದ ತಪ್ಪಿಸಿಕೊಂಡು ಹೊಗಿದ್ದು ಎಮ್ಮೆಗಳು ಫೇಸ್ ಬುಕ್ ಮುಖಾಂತರ ಪತ್ತೆಯಾಗಿರುವ ಅಪರೂಪದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಈಸ್ತೂರು ಗ್ರಾಮದಲ್ಲಿ ನಡೆದಿದೆ. ಹೌದು ಈಸ್ತೂರು ಗ್ರಾಮದ ನಿವಾಸಿಗಳಾದ ನಾರಾಯಣಸ್ವಾಮಿ ಮತ್ತು ಸುನಂದಮ್ಮ ಎಂಬುವರು ಹಲವು ವರ್ಷಗಳಿಂದ ಎಮ್ಮೆ ಮೇಯಿಸುತ್ತಾ ಜೀವನ ಸಾಗಿಸುತ್ತಿದ್ದು, ಕಳೆದ ಸೋಮವಾರ ತಮ್ಮ ಎರಡು ಎಮ್ಮೆಗಳನ್ನು ಮೇಯಿಸಲು ಗ್ರಾಮದ ಹೊರವಲಯಕ್ಕೆ ಸುನಂದಮ್ಮ ಎಂಬುವರು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೃದ್ದ ಸುನಂದಮ್ಮಳಿಂದ ಎಮ್ಮೆಗಳು ತಪ್ಪಿಸಿಕೊಂಡು ಹೊಗಿದ್ದು, ಕುಟುಂಬಸ್ಥರು 2 ದಿನಗಳ ಕಾಲ ಸುತ್ತಮುತ್ತಲಿನ ಗ್ರಾಮಗಳಲೆಲ್ಲ ಹುಡುಕಾಡಿದ್ರು ಎಲ್ಲು ಸಿಕ್ಕಿರಲಿಲ್ಲ. ಈ ವೇಳೆ ಈಸ್ತೂರಿನಿಂದ 12 ಕಿಲೋ ಮೀಟರ್ ದೂರದಲ್ಲಿರೂ ಕೊಂಡ್ರಹಳ್ಳಿಗೆ ಎಮ್ಮೆಗಳು ಹೋಗಿದ್ದ ಗ್ರಾಮದ ಯುವಕ ಮೋಹನ ರಸ್ತೆ ಮೇಲೆ ಅಡ್ಡಾದಿಡ್ಡಿ ಒಡಾಡುತ್ತಿದ್ದ ಎಮ್ಮೆಗಳನ್ನ ಹಿಡಿದು ಕಟ್ಟಿಹಾಕಿ ಸುತ್ತಮುತ್ತಲಿನ ಗ್ರಾಮಗಳಲ್ಲಿನ ರೈತರಲ್ಲಿ ಎಮ್ಮೆಗಳು ಯಾರದು ಅಂತ ವಿಚಾರಿಸಿದ್ದಾನೆ. ಆದ್ರೆ ಎಲ್ಲು ಎಮ್ಮೆಗಳ ಮಾಲಿಕರು ಪತ್ತೆಯಾಗದಿದ್ದು, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಎಮ್ಮೆಗಳು ಯಾರದು ಅಂತ ಪೊಟೋ ತೆಗೆದು ಪೋಸ್ಟ್ ಮಾಡಿದ್ದಾನೆ‌. ಹೀಗಾಗಿ ಎಮ್ಮೆಗಳ ಪೋಸ್ಟ್ ಕಂಡ ಎಮ್ಮೆಗಳ ಮಾಲೀಕ ನಾರಾಯಣಸ್ವಾಮಿ ತಮ್ಮನ ಮಗ ನಾಗೇಶ್ ಫೇಸ್ ಬುಕ್ ಪೊಟೋ ನಾರಾಯಣಸ್ವಾಮಿಗೆ ತೋರಿಸಿದ್ದು, ಮೋಹನ್ ಗೆ ಕರೆಮಾಡಿ ಎಮ್ಮೆಗಳು ನಮ್ಮದೆ ಅಂತ ನಡೆದ ವಿಚಾರ ತಿಳಿಸಿದ್ದು, ಕಳೆದು ಹೊಗಿದ್ದ ಎಮ್ಮೆಗಳು ಮರಳಿ ಫೇಸ್ ಬುಕ್ ಸಹಾಯದಿಂದ ಬಡ ರೈತನ ಮನೆಗೆ ಬಂದಿವೆ. ಇನ್ನೂ ಕೇವಲ ಟೈಂ ಪಾಸ್ ಗೆ ಫೇಸ್ ಬುಕ್ ನೋಡುತ್ತಿದ್ದ ಹಳ್ಳಿ ಯುವಕರು ಹಾಗೂ ಜನರಿಗೆ ಫೇಸ್ ಬುಕ್ ಈ ರೀತಿಯು ಕೆಲಸ ಮಾಡುತ್ತಾ ಅಂತ ಆಶ್ಚರ್ಯಪಟ್ಟಿದ್ದು, ಎಮ್ಮೆಗಳನ್ನ ಹಿಡಿದು ಮಾಲೀಕನಿಗೆ ಒಪ್ಪಿಸಿದ ಯುವಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Facebook interner ಹೊಸಕೋಟೆ ಸಾಮಾಜಿಕ ಜಾಲತಾಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ