ಪತ್ನಿಗೆ ಸೀಮೆಎಣ್ಣೆ ಸುರಿದು ಕೊಲೆ ಯತ್ನ

A man attempted to murder his wife

30-11-2017 398

ಕಲಬುರಗಿ: ಪತ್ನಿ ಅಡುಗೆಯಲ್ಲಿ ಹೆಚ್ಚಿಗೆ ಎಣ್ಣಿ  ಹಾಕಿದಳು ಎನ್ನುವ ಕಾರಣಕ್ಕಾಗಿ ಕುದಿಯುವ ಅಡುಗೆ ಎಣ್ಣೆಯನ್ನು ಪತ್ನಿಯ ಮುಖಕ್ಕೆ ಎರಚಿದ್ದಲ್ಲದೇ, ಮೈ ಮೇಲೆ ಸೀಮೆ ಎಣ್ಣೆ ಸುರಿದು ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಅಮಾನವೀಯ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದ್ದು, ನಾಲ್ಕು ದಿನಗಳ ನಂತರ ಬೆಳಕಿಗೆ ಬಂದಿದೆ. ಪ್ರಿಯಾಂಕಾ ಎನ್ನುವ ಇಪ್ಪತ್ತೆರಡು ವರ್ಷದ ಗೃಹಿಣಿ, ಗಂಡನಿಂದ ಬೆಂಕಿಯಲ್ಲಿ ಬೆಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆ‌. ಶೇಕಡಾ 80 ಕ್ಕಿಂತ ಹೆಚ್ಚು ಸುಟ್ಟ ಗಾಯಗಳೊಂದಿಗೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪ್ರಿಯಾಂಕಾಳಿಗೆ ಕಲಬುರಗಿ ನಗರದಲ್ಲಿರುವ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನೆಲೋಗಿ ಗ್ರಾಮದ ಭೀಮಾಶಂಕರ್ ಎಂಬಾತನೇ ಹೆಂಡತಿ ಅಡುಗೆಯಲ್ಲಿ ಎಣ್ಣೆ ಜಾಸ್ತಿ ಹಾಕಿದಳು ಅನ್ನೋ ಕಾರಣಕ್ಕೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪಾಪಿ ಪತಿ. ಚಿತ್ತಾಪುರ ತಾಲೂಕಿನ ಜೀವಣಗಿ ಗ್ರಾಮದ ಪ್ರಿಯಾಂಕಾ ಮತ್ತು ಭೀಮಾಶಂಕರ್‌ ವಿವಾಹ ನಾಲ್ಕು ವರ್ಷಗಳ ಹಿಂದೆ‌‌ ವಿವಾಹವಾಗಿತ್ತು. ಈ ದಂಪತಿಗೆ ಹದಿನೆಂಟು ತಿಂಗಳ ಹೆಣ್ಣು ಮಗುವಿದೆ. ಇನ್ನು ಮದುವೆಯಾದ ನಂತರ ಭೀಮಾಶಂಕರ್ ಮತ್ತು ಆತನ ತಾಯಿ, ಸಹೋದರಿ, ಪ್ರಿಯಾಂಕಾಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರಂತೆ, ಅಡುಗೆ ಮಾಡುವ‌ ವಿಷಯದಲ್ಲಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಲೆ ಇತ್ತಂತೆ. ಆದ್ರೆ ಕಳೆದ ಭಾನುವಾರ ಭೀಮಾಶಂಕರ್, ಇಂತಹದೊಂದು ದುಷ್ಕೃತ್ಯ ಎಸಗಿದ್ದಾನೆ. ಈ ಬಗ್ಗೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಪೊಲೀಸರು ಆರೋಪಿ ಭೀಮಾಶಂಕರ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಸಂಬಂಧಿತ ಟ್ಯಾಗ್ಗಳು

Kalaburagi Attempt to murder ಅಮಾನವೀಯ ಕೊಲೆ ಯತ್ನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ