ಬೆಂಕಿ ಅವಘಡ: 3 ಮಂದಿಗೆ ಗಂಭೀರ ಗಾಯ

gas cylinder: 3 injured

30-11-2017

ಬೆಂಗಳೂರು: ಮಹದೇವಪುರದ ಕಾವೇರಿನಗರ ಕೊಳಗೇರಿಯಲ್ಲಿ ನಿನ್ನೆ ರಾತ್ರಿ ಬಿಸಿ ನೀರು ಕಾಯಿಸಲು ಹೊತ್ತಿಸಿದ ಅಡುಗೆ ಅನಿಲ ಸಿಲಿಂಡರ್ಗೆ ಬೆಂಕಿ ಹತ್ತಿಕೊಂಡು ದಂಪತಿ ಮಗು ಸೇರಿ ಮೂವರು ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ಕಾವೇರಿ ನಗರದ ವೆಂಕಟೇಶ್ (33), ಅಂಬಿಕಾ (24) ಈ ದಂಪತಿಯ ಪುತ್ರ ಕೃಷ್ಣರಾಜ (6)ಎಂದು  ಗಾಯಗೊಂಡವನ್ನು ಗುರುತಿಸಲಾಗಿದೆ. ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರಿಗೂ ಶೇ. 20 ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಗಂಭೀರವಾಗಿದೆ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಈ ಮೂವರು ರಾತ್ರಿ 9ರ ವೇಳೆ ಮನೆಗೆ ಬಂದು ಸ್ನಾನಕ್ಕಾಗಿ ಬಿಸಿನೀರು ಕಾಯಿಸಲು ಸಣ್ಣಗಾತ್ರದ ಅಡುಗೆ ಅನಿಲ ಸಿಲಿಂಡರ್ ಹೊತ್ತಿಸಿದಾಗ ಬೆಂಕಿ ಹತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ. ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ