‘ಕೆಂಪಣ್ಣ ಆಯೋಗದ ವರದಿಯಲ್ಲೇನಿದೆ ಗೊತ್ತಿಲ್ಲ’30-11-2017

ಬೆಂಗಳೂರು: ಇಂಧನ ಇಲಾಖೆಯ ಅಕ್ರಮಗಳ ಕುರಿತ ವರದಿ ಮಂಡನೆಯಾಗಿದೆ, ಆದರೆ ಅದರ ಮೇಲೆ ಚರ್ಚೆ ನಡೆದಿಲ್ಲ, ಈಗ ವರದಿ ಸದನದ ಆಸ್ತಿ, ವರದಿ ಕುರಿತು ಸದನ ನಿರ್ಧಾರ ಕೈಗೊಳ್ಳುತ್ತದೆ ಎಂದು, ಕಾನೂನು ಸಚಿವ ಟಿ.ಬಿ ಜಯಚಂದ್ರ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನೈಸ್ ವರದಿ ಜಾರಿ ವಿಚಾರದಲ್ಲಿ ಹೆದರುವ ಪ್ರಶ್ನೆಯೇ ಇಲ್ಲ, ನೈಸ್ ಸಂಬಂಧ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳಲ್ಲಿ ಹಲವು ವ್ಯಾಜ್ಯಗಳಿವೆ, ಈ ವ್ಯಾಜ್ಯಗಳ ಕುರಿತು ಏನು ಮಾಡಬೇಕು ಎಂದು, ಎರಡೂ ನ್ಯಾಯಾಲಯಗಳ ಉನ್ನತ ಕೌನ್ಸಿಲ್ ಗಳ ಬಳಿ ಸಲಹೆ ಕೇಳಿದ್ದೇವೆ ಎಂದರು. ನೈಸ್ ವರದಿ ಪ್ರಕಾರ ಯೋಜನೆಗೆ ಹೆಚ್ಚುವರಿ ಭೂಮಿ ನೀಡಲಾಗಿದೆ, ವರದಿ ಮೇಲೆ ಅಂತಿಮ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಅರ್ಕಾವತಿ ಬಡಾವಣೆಯ ರೀಡೂ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾ.ಎಚ್.ಎಸ್.ಕೆಂಪಣ್ಣ ಆಯೋಗದಿಂದ ವರದಿ ಸಲ್ಲಿಕೆಯಾಗಿದೆ. ವರದಿಯಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ, ಕಾಲ ಬಂದಾಗ ಕೆಂಪಣ್ಣ ಆಯೋಗದ ವರದಿ ಮಂಡನೆ ಮಾಡುವುದಾಗಿ ತಿಳಿಸಿದರು.

ಇನ್ನು ಈಗಾಗಲೇ ವಿದೇಶಿ ಮರಳು ಆಮದು ಮತ್ತು ಹಂಚಿಕೆಗೆ ನಿಯಮ ರೂಪಿಸಲಾಗಿದೆ, ಮರಳು ದಂಧೆಯಲ್ಲಿ ತೊಡಗಿದವರ ವಾಹನಗಳಿಗೆ, ಇದುವರೆಗೆ ದಂಡ ಮಾತ್ರ ವಿಧಿಸಲಾಗುತ್ತಿತ್ತು. ಆದರೆ ಹೊಸ ನೀತಿಯ ನಂತರ ವಶಕ್ಕೆ ಪಡೆಯಲಾಗುವುದೆಂದರು. ಹೊಸ ವರ್ಷಕ್ಕೆ ಸರ್ಕಾರದಿಂದ ಮರಳು ಭಾಗ್ಯ ದೊರೆಯಲಿದ್ದು, ವಿದೇಶದಿಂದ ಮರಳು ಆಮದು ಮಾಡಿ ಕೊರತೆ ನಿವಾರಣೆಗೆ ನಿರ್ಧರಿಸಿದ್ದು, ಪರೀಕ್ಷೆ ನಡೆಸಿದ ಬಳಿಕವೇ, ಮಲೇಷಿಯಾದಿಂದ ಮರಳು ಆಮದಿಗೆ ನಿರ್ಧಾರ ಕೈಗೊಳ್ಳಲಾಗುವುದಾಗಿ ತಿಳಿಸಿದರು.

ಮಹದಾಯಿ ಹೋರಾಟಗಾರ ರೈತರಿಗೆ ನ್ಯಾಯಾಲಯದ ಸಮನ್ಸ್ ಬಂದಿರುವ ವಿಚಾರದ ಕುರಿತು ಮಾತನಾಡಿ, ಸಂಪುಟ ಸಭೆಯಲ್ಲಿ ರೈತರ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆಯಲು ತೀರ್ಮಾನಿಸಿದ್ದೇವೆ, ನ್ಯಾಯಾಲಯ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದಿದ್ದು, ಮೊಕದ್ದಮೆ ವಾಪಸ್ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

T.B.Jayachandra Ministry of Law ನ್ಯಾಯಾಲಯ ಅರ್ಕಾವತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ