ವಾಯು ವಿಹಾರಕ್ಕೆ ಹೋಗಿದ್ದ ವ್ಯಕ್ತಿ ಸಾವು

pedestrian died in car accident

30-11-2017

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರದ ಬಳಿ ಇಂದು ಬೆಳಿಗ್ಗೆ ವೇಗವಾಗಿ ಬಂದ ಕ್ಯಾಬ್ ಹರಿದು, ಮದುವೆ ಬ್ರೋಕರ್ ಒಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತಪಟ್ಟ ಬ್ರೋಕರ್ ಅವರನ್ನು ವೀರಸಂದ್ರದ ನಾರಾಯಣಪ್ಪ (70)ಎಂದು ಗುರುತಿಸಲಾಗಿದೆ. ಬೆಳಿಗ್ಗೆ 6ರ ವೇಳೆ ವಾಯುವಿಹಾರಕ್ಕೆ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದ ನಾರಾಯಣಪ್ಪ ಅವರು ವೀರಸಂದ್ರದ ಶಂಕರ್ ಪೈಪ್ ಶಾಪ್ ಬಳಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಅಪಘಾತವೆಸಗಿ ಪರಾರಿಯಾಗಿರುವ ಕ್ಯಾಬ್ ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ