ಜಿಎಸ್ ಟಿ: ‘ಗೃಹ ಕೈಗಾರಿಕೆಗಳಿಗೆ ತೊಂದರೆ’

GST: effect on small industries

30-11-2017

ಬೆಂಗಳೂರು: ಜಿಎಸ್ಟಿಯನ್ನು ಯುಪಿಎ ಅವಧಿಯಲ್ಲೇ ತರಲು ಪ್ರಯತ್ನ ಮಾಡಿದ್ದೆವು, ಆಗ ಬಿಜೆಪಿ ಅವಕಾಶ ಕೊಡಲಿಲ್ಲ ಎಂದು ಕೈಗಾರಿಕೆ ಸಚಿವ ಆರ್ ದೇಶಪಾಂಡೆ ಹೇಳಿದ್ದಾರೆ. ವಿಧಾನ ಸೌಧದಲ್ಲಿಂದು ಮಾತನಾಡಿದ ಅವರು, ಜಿಎಸ್ಟಿಯಿಂದ ಪಾರದರ್ಶಕತೆ ಬರಲು ಸಾಧ್ಯ, ಆದರೆ ಜಿಎಸ್ಟಿ ಫಿಕ್ಸ್ ಮಾಡೋವಾಗ ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಮಾಡಬೇಕು, ಎಂದಿದ್ದು, ಜಿಎಸ್ಟಿಯಿಂದ ಕೈಗಾರಿಕೆಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಜಿಎಸ್ಟಿ ಬಂದ ಮೇಲೆ ಚೆಕ್ ಪೋಸ್ಟ್ ತೆಗೆಯಲಾಗಿದೆ, ಚೆಕ್ ಪೋಸ್ಟ್ ಗಳು ಇನ್ನೂ ಇದೆ ಎಂಬ ಮಾಧ್ಯಮದವರ ಪ್ರಶ್ನೆಗೆ ದೇಶಪಾಂಡೆ ಗರಂ ಆದರು.

ಕೇಂದ್ರ ಸರ್ಕಾರ ಜಿಎಸ್ಟಿ ಜಾರಿ ಮಾಡಿದ ಹಿನ್ನೆಲೆ, ರಾಜ್ಯದ ಸಣ್ಣ ಮತ್ತು ಗೃಹ ಕೈಗಾರಿಕೆಗಳ ಮೇಲೆ ಪರಿಣಾಮ ಬಿದ್ದಿದೆ. ಜಿಎಸ್ಟಿ ಜಾರಿಗೆ ನಮ್ಮ ವಿರೋಧ ಇಲ್ಲ, ಆದರೆ ಜಾರಿ ಮಾಡುವುದಕ್ಕೂ ಮೊದಲು, ಸಣ್ಣಪುಟ್ಟ ಕೈಗಾರಿಕೆಗಳ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

R.v deshpande Industries ಜಿಎಸ್ ಟಿ ದುಷ್ಪರಿಣಾಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ