'ವಿಧಾನಸೌಧ ಶಾಲೆ ಆಗಬೇಕು’-ಉಪೇಂದ್ರ



30-11-2017

ಬೆಂಗಳೂರು: ಭವಿಷ್ಯದ ಗುರಿ ಹೇಗೆ ಇರಬೇಕು ಅಂದ್ರೆ ಪ್ರಪಂಚವನ್ನೇ ಸರಿ ಮಾಡ್ತೀನಿ‌ ಅನ್ನೊ ರೀತಿ ಇರಬೇಕು, ಗುರಿ ಅನ್ನೊದನ್ನ ನಮಗೋಸ್ಕರ ಇಡಬಾರದು, ಸಮಾಜಕ್ಕಾಗಿ ಇಡಬೇಕು, ಇಡೀ ಪ್ರಪಂಚದಲ್ಲಿ ಎಲ್ಲರನ್ನು ಖುಷಿ ಆಗಿಡಬೇಕು ಅನ್ನೊದು ನನ್ನ ಗುರಿ ಎಂದು, ನಟ ಉಪೇಂದ್ರ ಹೇಳಿದ್ದಾರೆ.

ನನ್ನ ಗುರಿ ಸಾಧಿಸಲೆಂದೇ ಫೇಮಸ್ ಆಗಬೇಕೆಂದು ಸಿನೆಮಾ ರಂಗಕ್ಕೆ ಕಾಲಿಟ್ಟೆ, ಆದರೆ ನನ್ನ ಬದುಕು ಉಪ್ಪಿಟ್ಟು ಥರ ಆಗಿದೆ, ರಾಜಕೀಯ ಅನ್ನೊದು ಈ ದೇಶದಲ್ಲಿ ಇರಬಾರದು, ವಿಧಾನಸೌಧ, ವಿಕಾಸ ಸೌಧ ಮಕ್ಕಳ ಶಾಲೆ ಆಗಬೇಕು, ರಾಜರ ಆಡಳಿತದಿಂದ ಹೊರ ಬಂದು ದಶಕಗಳು ಕಳೆದಿವೆ, ಸತ್ ಪ್ರಜೆಗಳೆ ಏಳಿ ಎದ್ದೇಳಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದು ಅಲ್ಲದೇ, ಸಿನೆಮಾ ಶೈಲಿಯಲ್ಲಿಯೇ ಸಖತ್ ಡೈಲಾಗ್ ಹೇಳಿ ರಂಜಿಸಿದ್ದಾರೆ.

ಇದಲ್ಲದೇ, ಪ್ರಜಾಕೀಯ ಆ್ಯಪ್ ಬಿಡುಗಡೆ ಆಗಿದೆ, ಅದನ್ನು ಡೌನ್ ಲೋಡ್ ಮಾಡಿ ಬಳಸಿ, ನಾಯಕರು ನಾಯಕರಲ್ಲ, ಅವರೆಲ್ಲ ಕಾರ್ಮಿಕರು, ಬ್ಯುಸಿನೆಸ್ ಪಾಲಿಟಿಕ್ಸ್ ನಮಗೆ ಬೇಡ, ನಮ್ಮ ದುಡ್ಡನ್ನು ನೀವು ಹೇಗೆ ಬಳಸ್ತೀರಾ ಅನ್ನೊದು ಮುಖ್ಯ, ರಾಜಕೀಯದಲ್ಲಿ ಬದಲಾವಣೆ ಬೇಕು, ಅದನ್ನು ತರೋಣ ಎಂದು ಹೇಳಿದ್ದು, ನಾನು ಬದಲಾವಣೆ ತರಲು ಹೊರಟ್ಟಿದ್ದೇನೆ, ಸತ್ತರೂ ಏನಾದರು ಸಾಧಿಸಿದ್ದೇನೆ ಎಂಬ ತೃಪ್ತಿ ಇರುತ್ತದೆ ಎಂದರು.

 


ಸಂಬಂಧಿತ ಟ್ಯಾಗ್ಗಳು

Upendra politics ವಿಧಾನಸೌಧ ಪ್ರಜಾಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ