ಟೆಕಿಗಳಿಗೂ ಸಂವಿಧಾನದ ರುಚಿ…!

constitution is included in BE syllabus

30-11-2017

ಇಲ್ಲಿಯವರೆಗೂ ಸಿವಿಲ್, ಎಲೆಕ್ಟ್ರಿಕಲ್, ಕೆಮಿಕಲ್, ಕಂಪ್ಯೂಟರ್ ಸೈನ್ಸ್ ಇತ್ಯಾದಿ ವಿಷಯಗಳನ್ನು ಕಲಿಯುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಇದೀಗ ನಮ್ಮ ಸಂವಿಧಾನದ ಬಗ್ಗೆಯೂ ತಿಳಿದುಕೊಳ್ಳಬೇಕಾಗಿದೆ. ಎಐಸಿಟಿಇ ಅಂದರೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ರೂಪಿಸಿರುವ ಹೊಸ ಸಿಲಿಬಸ್ ಅಂದರೆ ಪಠ್ಯಕ್ರಮದಲ್ಲಿ ಭಾರತದ ಸಂವಿಧಾನ, ಪರಿಸರ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಭಾರತದ ಸಾಂಪ್ರದಾಯಕ ಜ್ಞಾನದ ಸಾರಾಂಶವನ್ನೂ ಅಳವಡಿಸಲಾಗಿದೆಯಂತೆ.  

ದೇಶದ ಸುಮಾರು 3 ಸಾವಿರ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಇದನ್ನೆಲ್ಲಾ ಓದಿ ತಿಳಿದುಕೊಳ್ಳುವುದು ಮಾತ್ರವಲ್ಲ ಪರೀಕ್ಷೆಯಲ್ಲಿ ಪಾಸಾಗುವುದೂ ಕಡ್ಡಾಯ. ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವ ಈ ಹೊಸ ಸಿಲಿಬಸ್ ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅಂಗೀಕಾರ ನೀಡಿದೆ. ಆದರೆ, ಐಐಟಿಗಳು ಮತ್ತು ಎನ್‌ಐಟಿಗಳಿಗೆ ಈ ಹೊಸ ಸಿಲಿಬಸ್ ಅನ್ವಯವಾಗುವುದಿಲ್ಲ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ