ಪೊಲೀಸ್ ವಸತಿ ಗೃಹಗಳಿಗೆ ನೀರು ಸ್ಥಗಿತ

No water for police residential homes

30-11-2017

ಮಂಡ್ಯ: ಕಂದಾಯ ಬಾಕಿ ಹಿನ್ನೆಲೆ, ಪೊಲೀಸರ ಮನೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಿರುವ ಘಟನೆಯು, ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಶ್ರೀರಂಗಪಟ್ಟಣದಲ್ಲಿ ಪುರಸಭೆಯು ಕಂದಾಯ ಬಾಕಿ ವಸೂಲಿಗಾಗಿ ನಿರ್ಧಾರ ಮಾಡಿದ್ದು, ಈ ಕ್ರಮದಿಂದ ಪೊಲೀಸರ ಹೈರಾಣಾಗಿದ್ದಾರೆ.

2003ನೇ ಸಾಲಿನಿಂದ ಪುರಸಭೆಗೆ ಪೊಲೀಸ್ ಇಲಾಖೆಯಿಂದ 6 ಲಕ್ಷ ರೂ ನೀರಿನ ಕಂದಾಯ ಸಂದಾಯವಾಗಬೇಕಿದೆ, ಅನೇಕ ಬಾರಿ ಪತ್ರ ಬರೆದರು ಪೊಲೀಸ್ ಇಲಾಖೆ ಹಣ ಪಾವತಿಸದ ಹಿನ್ನೆಲೆಯಲ್ಲಿ, ಪೊಲೀಸ್ ವಸತಿ ಗೃಹಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಿದೆ. ಇದರಿಂದ ಪೊಲೀಸ್ ಕುಟುಂಬಗಳು ಪರದಾಡುವಂತಾಗಿದೆ.


ಸಂಬಂಧಿತ ಟ್ಯಾಗ್ಗಳು

Srirangapatna Residential Home ನೀರು ಪೂರೈಕೆ ವಸತಿ ಗೃಹ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ