ಬೀದಿನಾಯಿ ಕಚ್ಚಿ ಬಾಲಕ ಸಾವು

street dog attack on boy

30-11-2017

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೀದಿ ನಾಯಿ ಕಡಿತಕ್ಕೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ಆಫ್ರೀದಿ ಹಮೀದ್ ಬೇಪಾರಿ (7) ಮೃತಪಟ್ಟಿರುವ ಬಾಲಕ ಎಂದು ತಿಳಿದು ಬಂದಿದೆ. ಈತ ಹುಬ್ಬಳ್ಳಿಯ ಸಿಬಿಟಿ ಬಳಿಯ, ಮಂಟೂರ ರಸ್ತೆ ನಿವಾಸಿಯಾಗಿದ್ದು, 15 ದಿನದ ಹಿಂದೆ ಬಾಲಕ ಆಫ್ರೀದಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿತ್ತು. ಮೊದಲು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ಒಂದು ದಿನ ಚಿಕಿತ್ಸೆ ನೀಡಿ, ಡಿಸ್ ಚಾರ್ಜ್ ಮಾಡಿದ್ದರು.

ಇದಾದ ಮೇಲೆ ನಿನ್ನೆ ಬೆಳಿಗ್ಗೆ ಬಾಲಕನ ಆರೋಗ್ಯದಲ್ಲಿ ಏರುಪೇರಾಗಿದ್ದು, ಮತ್ತದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ. ಅದಲ್ಲದೇ ಮರಣೋತ್ತರ ಪರೀಕ್ಷೆ ಮಾಡದೆಯೇ ಮೃತದೇಹವನ್ನು ಕಿಮ್ಸ್ ವೈದ್ಯರು ಪೊಷಕರಿಗೆ ಹಸ್ತಾಂತರಿಸಿದ್ದಾರೆ.

ಆದರೆ ಮೊದಲೇ ಸರಿಯಾದ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿದರಾ ವೈದ್ಯರು ಎಂಬ ಅನುಮಾನ ಈಗ ಕಾಡುತ್ತಿದೆ. ಮೃತ ಬಾಲಕನ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಬೀದಿ ನಾಯಿಗಳ ಹಾವಳಿ ತಪ್ಪಿಸಲು ಪಾಲಿಕೆ ವಿಫಲವಾಗಿದೆ ಎಂದು, ಮೃತ ಬಾಲಕನ ಪೊಷಕರು ಪಾಲಿಕೆ ಅಧಿಕಾರಿಗಳ ‌ವಿರುದ್ಧ ಆಕ್ರೋಶಗೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

street dog kims ಆರೋಗ್ಯ ನಿರ್ಲಕ್ಷ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ