‘ಬನ್ಸಾಲಿಗೆ ಬೇರೆ ಕಥೆ ಸಿಗಲಿಲ್ಲವೇ’..?

pratap simha questioning bhansali...?

30-11-2017

ಮೈಸೂರು: ಪದ್ಮಾವತಿ ಚಿತ್ರದ ಬಗ್ಗೆ ನಾನು ಈವರಗೆ ಮಾತನಾಡೇ ಇಲ್ಲ, ಕಾರಣ ನನಗೆ ಮಾತನಾಡಬೇಕು ಅಂತ ಅನಿಸಿಯೇ ಇಲ್ಲಾ ಎಂದು ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿಂದು ಮಾತನಾಡಿದ ಅವರು, ಪದ್ಮಾವತಿ ಚಿತ್ರದ ಪರ ಅಥವಾ ವಿರೋಧದ ಬಗ್ಗೆ ನಾನು ಮಾತನಾಡಲ್ಲ ಎಂದರು. ಕೆಲವು ಚಿತ್ರಗಳು ಪಬ್ಲಿಸಿಟಿ ಹಾಗು ಕಮಾಯಿ ಮಾಡಲು ಗಿಮಿಕ್ ಮಾಡ್ತವೆ, ಅಂತಹದ್ದೇ ಗಿಮಿಕ್ ಪದ್ಮಾವತಿ ಚಿತ್ರದ್ದೂ ಇರಬಹುದು, ಅವರು ಮಾಡಿರುವುದು ಸರಿಯೋ? ಅದು ಇವಾಗ ಬ್ಯಾನ್ ಆಗಬೇಕೋ ಎನ್ನುವುದು ವಿಚಾರವಲ್ಲ, ಇತಿಹಾಸ ಗೊತ್ತಿಲ್ಲದಿದ್ದರೆ ಭವಿಷ್ಯ ಕೂಡ ಇಲ್ಲ, ಅದೇ ರೀತಿ ಇತಿಹಾಸ ತಿರುಚಿದವರಿಗೂ ಕೂಡ ಭವಿಷ್ಯ ಇರಲ್ಲ ಎಂದಿದ್ದಾರೆ. ಪದ್ಮಾವತಿಯಲ್ಲಿ ಇತಿಹಾಸ ತಿರುಚಲಾಗಿದೆ ಎಂಬ ದೊಡ್ಡ ಕೂಗು ಕೇಳಿ ಬರುತ್ತಿದೆ, ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಬೇರೆ ಕಥೆ ಸಿಗಲಿಲ್ಲವೇ..? ಎಂದು ಪ್ರಶ್ನಿಸಿದ್ದಾರೆ.

ಅವರ ಇತ್ತೀಚಿನ ಟ್ರಾಕ್ ರೆಕಾರ್ಡ್ ನೋಡಿದರೆ ಗೊತ್ತಾಗುತ್ತೆ, ಇತ್ತೀಚೆಗೆ ಹೆಚ್ಚು ಫ್ಲಾಪ್ ಚಿತ್ರಗಳನ್ನು ಅವರು ನೀಡಿದ್ದಾರೆ, ಇದೊಂದು ವಿವಾದ ಸೃಷ್ಠಿಸುವ ಮೂಲಕ ಹಿಟ್ ಮಾಡಿಕೊಳ್ಳುವ ತಂತ್ರವಿರಬಹುದು, ಅದು ಅವರ ಪ್ರಯತ್ನವಾಗಿದ್ದರೆ ಇತಿಹಾಸಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದು ಹೇಳಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Pratap Simha Padmavati ಗಿಮಿಕ್ ಇತಿಹಾಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ