‘ಸಿದ್ದು-ಪರಂ ನಡುವೆ ಭಿನ್ನಮತ’-ಬಿಎಸ್ ವೈ29-11-2017 355

ಬಾಗಲಕೋಟೆ: ಕಾಂಗ್ರೆಸ್ ನಲ್ಲಿ ಭಿನ್ನಮತ ಮುಗಿಲು ಮುಟ್ಟಿದೆ, ಸಿದ್ದರಾಮಯ್ಯ ಮತ್ತು ಪರಮೇಶ್ವರ ಮಧ್ಯೆ ತೀವ್ರ ಭಿನ್ನಮತವಿದೆ, ಇಬ್ಬರೂ ಒಂದೊಂದು ದಿಕ್ಕಿಗೆ ಮುಖ ಮಾಡಿದ್ದಾರೆ, ಹೀಗಾಗಿ ಮತ್ತೆ ಅಧಿಕಾರಕ್ಕೆ ಬರೋದು ನಾವೇ ಎಂದು, ಬಾಗಲಕೋಟೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಇನ್ನು ಮಹಾದಾಯಿ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡೋಕೆ ಸಾಧ್ಯವಿಲ್ಲ, ಸಿದ್ದರಾಮಯ್ಯ ಇಲ್ಲದೆ ಸಮಸ್ಯೆ ಬಗೆ ಹರಿಸುವ ಕೆಲಸ ಮಾಡುತ್ತೇನೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ. ಯಾತ್ರೆ ಕುರಿತು ಸಿದ್ದರಾಮಯ್ಯ ಅವರ ಸಟಿ೯ಫಿಕೇಟ್ ನನಗೆ ಬೇಕಿಲ್ಲ, ಹೋದ ಕಡೆಗೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಎಸಿಬಿ ದುರಪಯೋಗ ಮಾಡಿಕೊಂಡು ಹಗರಣಗಳಿಗೆ ಕ್ಲೀನಚಿಟ್ ಪಡೆಯುತ್ತಿರುವ ಕಾಂಗ್ರೆಸ್ ನಾಯಕರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕ್ಲೀನ ಚಿಟ್ ಪಡೆದ ಎಲ್ಲ ಪ್ರಕರಣಗಳ ಸಮಗ್ರ ತನಿಖೆಗೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ, ಎಚ್.ಆಂಜನೇಯವರ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, 1 ಕೋಟಿಗೆ ಪ್ರತಿಶತ 8 ರಿಂದ 10 ರಷ್ಟು ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  2018ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಸೂಯ೯ ಚಂದ್ರಾದಿಗಳಷ್ಟೇ ಸತ್ಯ ಎಂದರು. ಸಿದ್ದರಾಮಯ್ಯ ನವರೇ ನಿಮ್ಮ ಖಜಾನೆ ಖಾಲಿಯಾಗಿದ್ದು ನಿಜವಲ್ಲವೇ..? ಎಂದು ಪ್ರಶ್ನಿಸಿದ ಅವರು, 224 ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಪಕ್ಷದ ಪ್ರಣಾಳಿಕೆ ತಯಾರಿಸಿ ಕಾಯ೯ರೂಪಕ್ಕೆ ತರುತ್ತೇವೆ ಎಂದು ತಿಳಿಸಿದರು.

 ಸಂಬಂಧಿತ ಟ್ಯಾಗ್ಗಳು

B.s yeddyurappa Parameshwara ಮಹಾದಾಯಿ ಸಟಿ೯ಫಿಕೇಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ