ಬಾಲ್ಯ ವಿವಾಹ ತಡೆದ ಅಧಿಕಾರಿಗಳು

officers stopped child marriage

29-11-2017

ಯಾದಗಿರಿ: ಬಾಲ್ಯ ವಿವಾಹ ನಡೆಯುತ್ತಿದ್ದ ವೇಳೆ ಅಧಿಕಾರಿಗಳ ತಂಡ ದಾಳಿ ಮಾಡಿ, ಬಾಲಕಿಯನ್ನು ರಕ್ಷಿಸಿದ್ದಾರೆ. ಘಟನೆಯು ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ರಾಮುನಾಯಕ್ ತಾಂಡದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಹಾಗು ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಮದುವೆಯನ್ನು ತಡೆದಿದ್ದಾರೆ.

ರಾಮುನಾಯಕ್ ತಾಂಡದ ಆಕಾಶ್ ರಾಠೋಡ್ (19), ಬಾಂಗ್ಲಾ ತಾಂಡದ ಆಂಜನಿಬಾಯಿ ಚವಾಣ (14) ಎನ್ನುವ ಅಪ್ರಾಪ್ತರ ಮದುವೆ ನಡೆಯುತ್ತಿತ್ತು, ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡುವುದು ಕಾನೂನು ಬಾಹಿರ, ಅಪರಾಧ ಹಿನ್ನೆಲೆ ಮದುವೆಗೆ ತಡೆ ಒಡ್ಡಿದ್ದು, ಹುಡುಗನಿಗೆ 21, ಹುಡುಗಿಗೆ 18 ವಯಸ್ಸಿನ ವರೆಗೆ ಮದುವೆ ಮಾಡದಂತೆ ಪೊಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ